ADVERTISEMENT

ಮಾನವ ಹಕ್ಕುಗಳ ಕಾಳಜಿ ನಿರಂತರ: ಅಮೆರಿಕ ಅಧಿಕಾರಿ

ಪಿಟಿಐ
Published 8 ಆಗಸ್ಟ್ 2023, 13:44 IST
Last Updated 8 ಆಗಸ್ಟ್ 2023, 13:44 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ವಾಷಿಂಗ್ಟನ್: ‘ಮಾನವ ಹಕ್ಕುಗಳ ವಿಷಯದಲ್ಲಿ ಅಮೆರಿಕವು ಭಾರತದ ಜೊತೆ ಈ ಹಿಂದೆಯೂ ನಿರಂತರವಾಗಿ ಕೈಜೋಡಿಸಿದೆ, ಭವಿಷ್ಯದಲ್ಲೂ ತನ್ನ ಕಾಳಜಿಯನ್ನು ಮುಂದುವರೆಸಲಿದೆ’ ಎಂದು ಅಮೆರಿಕದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಭಾರತದಲ್ಲಿ ಕ್ರೈಸ್ತರಿಗೆ ಕಿರುಕುಳ ನೀಡಲಾಗುತ್ತಿದೆ ಎಂಬ ಆರೋಪವಿದೆ. ಸೆಪ್ಟೆಂಬರ್‌ನಲ್ಲಿ ನವದೆಹಲಿಯಲ್ಲಿ ನಡೆಯಲಿರುವ ಜಿ 20 ಶೃಂಗಸಭೆಯಲ್ಲಿ ಭಾಗವಹಿಸಲಿಕ್ಕಾಗಿ ಅಧ್ಯಕ್ಷ ಜೋ ಬೈಡನ್ ಅಲ್ಲಿಗೆ ಭೇಟಿ ನೀಡಿದಾಗ ಈ ಬಗ್ಗೆ ಚರ್ಚಿಸುತ್ತಾರೆಯೇ’ ಎಂದು ಪತ್ರಕರ್ತರೊಬ್ಬರು ಪತ್ರಿಕಾಗೋಷ್ಠಿಯಲ್ಲಿ ಕೇಳಿದ ಪ್ರಶ್ನೆಗೆ ವಿದೇಶಾಂಗ ಇಲಾಖೆಯ ವಕ್ತಾರ ಮ್ಯಾಥ್ಯೂ ಮಿಲ್ಲರ್ ಹೀಗೆ ಪ್ರತಿಕ್ರಿಯಿಸಿದ್ದಾರೆ.

‘ನಾವು ಎಲ್ಲ ದೇಶಗಳೊಟ್ಟಿಗೆ ಮಾನವ ಹಕ್ಕುಗಳ ಬಗ್ಗೆ ನಮ್ಮ ಕಾಳಜಿ ವ್ಯಕ್ತಪಡಿಸುತ್ತೇವೆ. ಕ್ರೈಸ್ತರಿಗಷ್ಟೇ ಅಲ್ಲ, ಪ್ರತಿಯೊಂದು ಧರ್ಮದವರ ಶೋಷಣೆ, ಕಿರುಕುಳದ ಬಗ್ಗೆಯೂ ಕೇಳುತ್ತೇವೆ’ ಎಂದಿದ್ದಾರೆ.

ADVERTISEMENT

‘ಇಂತಹ ಆರೋಪ ತಪ್ಪು ಮಾಹಿತಿ ಹಾಗೂ ದೋಷಪೂರಿತ ತಿಳಿವಳಿಕೆಯದ್ದು’ ಎಂದು ಭಾರತ ಈ ಹಿಂದೆ ಹಲವು ಬಾರಿ ಪ್ರತಿಕ್ರಿಯಿಸಿದೆ.

ಈ ವರದಿಯ ಕುರಿತಂತೆ ಮಾಧ್ಯಮದವರು ಪ್ರಶ್ನಿಸಿದ್ದಕ್ಕೆ ‘ನಾವು ಅಮೆರಿಕದ ಜೊತೆಗಿನ ಮೌಲ್ಯಯುತ ಪಾಲುದಾರಿಕೆಯನ್ನು ಮುಂದುವರೆಸುತ್ತೇವೆ. ಕಾಳಜಿಯ ವಿಷಯದಲ್ಲಿ ಸ್ಪಷ್ಟ ವಿನಿಮಯವನ್ನು ಮುಂದುವರಿಸುತ್ತೇವೆ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.