ADVERTISEMENT

ಅಮೆರಿಕದಲ್ಲಿ ‘ರೆಮ್‌ಡೆಸಿವಿರ್’‌ ಬಳಕೆಗೆ ಒಪ್ಪಿಗೆ

ಏಜೆನ್ಸೀಸ್
Published 29 ಆಗಸ್ಟ್ 2020, 12:33 IST
Last Updated 29 ಆಗಸ್ಟ್ 2020, 12:33 IST
ಗಿಲೀಡ್‌ ಸೈನ್ಸಸ್‌
ಗಿಲೀಡ್‌ ಸೈನ್ಸಸ್‌   

ಫೋಸ್ಟರ್‌ ಸಿಟಿ: ‘ಆಸ್ಪತ್ರೆಗೆ ದಾಖಲಾದ ಎಲ್ಲಾ ಕೋವಿಡ್‌–19 ರೋಗಿಗಳಿಗೆ ‘ರೆಮ್‌ಡೆಸಿವಿರ್‌’ ಔಷಧ ನೀಡಲು ಅಮೆರಿಕದಲ್ಲಿ ಅನುಮತಿ ನೀಡಲಾಗಿದೆ’ ಎಂದು ಫಾರ್ಮಾ ಕಂಪನಿ ಗಿಲೀಡ್‌ ಸೈನ್ಸಸ್‌, ಶುಕ್ರವಾರ ತಿಳಿಸಿದೆ.

ವೈರಾಣು ನಿರೋಧಕ ‘ರೆಮ್‌ಡೆಸಿವಿರ್‌’ ಔಷಧವನ್ನು ತುರ್ತು ಸಂದರ್ಭದಲ್ಲಿ ಮಾತ್ರ ಬಳಸಲು ಈ ಮೊದಲು ಅನುಮತಿ ನೀಡಲಾಗಿತ್ತು.

ರೆಮ್‌ಡೆಸಿವಿರ್‌ ಔಷಧಕ್ಕೆ ಅನುಮೋದನೆ ನೀಡುವಂತೆ ಗಿಲೀಡ್‌ ಸಂಸ್ಥೆಯು ಆಗಸ್ಟ್‌ 10ರಂದು ಆಹಾರ ಮತ್ತು ಔಷಧ ಮಂಡಳಿಗೆ (ಎಫ್‌ಡಿಎ) ಅರ್ಜಿ ಸಲ್ಲಿಸಿತ್ತು. ವೆಂಕ್ಲುರಿ ಎಂಬ ಬ್ರ್ಯಾಂಡ್‌ ಹೆಸರಿನಲ್ಲಿ ಔಷಧ ಮಾರಾಟ ಮಾಡಲು ಸಂಸ್ಥೆ ನಿರ್ಧರಿಸಿತ್ತು.

ADVERTISEMENT

‘ರೆಮ್‌ಡೆಸಿವಿರ್’‌ ಔಷಧ ನೀಡಿದ ಶೇಕಡ 65ರಷ್ಟು ರೋಗಿಗಳುಆಸ್ಪತ್ರೆಗೆ ದಾಖಲಾದ ಇತರ ಕೋವಿಡ್‌–19 ರೋಗಿಗಳಿಗಿಂತಲೂ ಬೇಗನೆ ಗುಣಮುಖರಾಗಿರುವುದು ಗಿಲೀಡ್‌ ಕಂಪನಿ ನಡೆಸಿದ ಅಧ್ಯಯನದಿಂದ ತಿಳಿದುಬಂದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.