ಪ್ಯಾರಿಸ್: ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆಯಾದ ಯುನೆಸ್ಕೊ ಇಸ್ರೇಲಿ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ ಎಂದು ಆರೋಪಿಸಿ, ಅದರಿಂದ ಮತ್ತೆ ಹೊರಬರುವುದಾಗಿ ಅಮೆರಿಕ ಮಂಗಳವಾರ ಹೇಳಿದೆ. ಈ ಹಿಂದೆ ಕೂಡಾ ಅದರಿಂದ ಹೊರಬಂದಿದ್ದ ಅಮೆರಿಕ, ಎರಡು ವರ್ಷಗಳ ಹಿಂದೆಯಷ್ಟೆ ಮತ್ತೆ ಸೇರಿಕೊಂಡಿತ್ತು.
‘ಅಮೆರಿಕ ಅಧ್ಯಕ್ಷ ಟ್ರಂಪ್ ಅವರು ಯುನೆಸ್ಕೊದಿಂದ ಹೊರಬರಲು ನಿರ್ಧರಿಸಿದ್ದಾರೆ’ ಎಂದು ಶ್ವೇತಭವನದ ಉಪ ವಕ್ತಾರೆ ಅನ್ನಾ ಕೆಲ್ಲಿ ‘ನ್ಯೂಯಾರ್ಕ್ ಪೋಸ್ಟ್’ಗೆ ತಿಳಿಸಿದ್ದಾರೆ.
ಯುನೆಸ್ಕೊವನ್ನು ಅಮೆರಿಕ ತೊರೆಯುತ್ತಿರುವುದು ಇದು ಮೂರನೇ ಬಾರಿಯಾಗಿದ್ದು, ಟ್ರಂಪ್ ಆಡಳಿತದಲ್ಲಿ ಎರಡನೇ ಬಾರಿಯಾಗಿದೆ. ಟ್ರಂಪ್ ಮೊದಲನೇ ಅಧಿಕಾರಾವಧಿಯಲ್ಲಿ ಅದರಿಂದ ಅಮೆರಿಕ ಹೊರಬಂದಿತ್ತು. ಐದು ವರ್ಷಗಳ ನಂತರ, ಆಗ ಅಮೆರಿಕ ಅಧ್ಯಕ್ಷರಾಗಿದ್ದ ಜೋ ಬೈಡನ್ ಮತ್ತೆ ಸಂಸ್ಥೆಗೆ ಸೇರಿಕೊಳ್ಳಲು ಅರ್ಜಿ ಸಲ್ಲಿಸಿದ್ದರು. ಪಸ್ತುತ ನಿರ್ಧಾರವು 2026ರ ಡಿಸೆಂಬರ್ ಕೊನೆಯ ವೇಳೆ ಜಾರಿಗೆ ಬರಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.