ವಾಷಿಂಗ್ಟನ್:ಅಫ್ಗಾನಿಸ್ತಾನ ಪರಿಸ್ಥಿತಿಯ ಬಗ್ಗೆ ಚರ್ಚಿಸಲು ರಷ್ಯಾ ಆಹ್ವಾನಿಸಿರುವ ಸಭೆಯಲ್ಲಿ ಭಾಗವಹಿಸುವುದಿಲ್ಲ ಎಂದು ಅಮೆರಿಕ ಸ್ಪಷ್ಟಪಡಿಸಿದೆ. ಚೀನಾ ಹಾಗೂ ಪಾಕಿಸ್ತಾನವೂ ಸಭೆಯಲ್ಲಿ ಭಾಗವಹಿಸಲಿವೆ.
ʼಆ ವೇದಿಕೆಯೊಂದಿಗೆಮುಂದುವರಿಯಲು ಎದುರು ನೋಡುತ್ತಿದ್ದೇವೆ. ಆದರೆ, ನಾವು ಈ ವಾರ ಭಾಗವಹಿಸಲು ಸಾಧ್ಯವಾಗುತ್ತಿಲ್ಲʼ ಎಂದು ವಿದೇಶಾಂಗ ಸಚಿವಾಲಯದವಕ್ತಾರ ನೆಡ್ ಪ್ರೈಸ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.