ADVERTISEMENT

ಕೋವಿಡ್‌ ಪತ್ತೆಗಾಗಿ ಶ್ವಾನಗಳಿಗೆ ತರಬೇತಿ ನೀಡಲು ಮುಂದಾದ ಅಮೆರಿಕದ ವಿಜ್ಞಾನಿಗಳು!

ಪಿಟಿಐ
Published 4 ಮೇ 2020, 20:00 IST
Last Updated 4 ಮೇ 2020, 20:00 IST
   

ವಾಷಿಂಗ್ಟನ್‌: ಮನುಷ್ಯರಲ್ಲಿನ ಕೋವಿಡ್‌ ಪತ್ತೆ ಮಾಡಲು ಅಮೆರಿಕದ ವಿಜ್ಞಾನಿಗಳು ಈಗ ಶ್ವಾನವನ್ನು ಬಳಸಲು ಮುಂದಾಗಿದ್ದಾರೆ.

ಈ ಪತ್ತೆ ಕಾರ್ಯಕೈಗೊಳ್ಳಲು ಶ್ವಾನಗಳಿಗೆ ತರಬೇತಿ ನೀಡಲಾಗುತ್ತಿದೆ. ಜೊಲ್ಲು ಮತ್ತು ಮೂತ್ರದ ಮಾದರಿಗಳ ವಾಸನೆಯನ್ನು ಗ್ರಹಿಸುವ ಮೂಲಕ ಶ್ವಾನಗಳು ವೈರಾಣು ಇರುವುದನ್ನು ಪತ್ತೆ ಮಾಡುವ ಕಾರ್ಯ ಕೈಗೊಳ್ಳುತ್ತವೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಅಮೆರಿಕದ ಪೆನ್ನಸಿಲ್ವೆನಿಯಾ ವಿಶ್ವವಿದ್ಯಾಲಯದ ಪಶು ವೈದ್ಯಕೀಯ ಶಾಲೆಯ ವಿಜ್ಞಾನಿಗಳು ಶ್ವಾನಗಳಿಗೆ ತರಬೇತಿ ನೀಡುವ ಕಾರ್ಯಕೈಗೊಂಡಿದ್ದಾರೆ. ಕೋವಿಡ್‌–19 ದೃಢಪಟ್ಟಿರುವ ವ್ಯಕ್ತಿ ಮತ್ತು ಕೋವಿಡ್‌–19 ಇಲ್ಲದ ವ್ಯಕ್ತಿಯ ನಡುವೆ ಇರುವ ವ್ಯತ್ಯಾಸವನ್ನು ವಾಸನೆ ಮೂಲಕ ಗುರುತಿಸಲಿವೆ.

ADVERTISEMENT

ಶ್ವಾನಗಳಲ್ಲಿ ವಾಸನೆ ಗ್ರಹಿಸುವ ಅಪಾರ ಸಾಮರ್ಥ್ಯವಿರುವುದರಿಂದ ಇದು ಸಾಧ್ಯವಾಗಲಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.