ಅಮೆರಿಕ ಧ್ವಜ
ಸಾಂದರ್ಭಿಕ ಚಿತ್ರ
ವಾಷಿಂಗ್ಟನ್: ವಲಸಿಗರ ಕುಟುಂಬ ಒಗ್ಗೂಡಿಸುವ, ಕುಟುಂಬ ಆಧಾರಿತ ವಲಸಿಗರ ಶಿಬಿರ ಸ್ಥಾಪಿಸಲು ಒತ್ತು ನೀಡುವ ಮಸೂದೆಯನ್ನು ಡೆಮಾಕ್ರಟಿಕ್ ಪಕ್ಷದ ಇಬ್ಬರು ಸದಸ್ಯರು ಬುಧವಾರ ಮಂಡಿಸಿದರು. ಭಾರತ ಮತ್ತು ಚೀನಾದವರಿಗೆ ಹೆಚ್ಚಿನ ವೀಸಾ ನೀಡಲು ಮಸೂದೆ ಅವಕಾಶ ಕಲ್ಪಿಸಲಿದೆ.
ಸೆನೆಟ್ ಸದಸ್ಯರಾದ ಮಾಝಿ ಕೆ. ಹಿರೊನೊ ಮತ್ತು ಟ್ಯಾಮಿ ಡಕ್ವರ್ಥ್ ಅವರು ‘ಕುಟುಂಬ ಒಗ್ಗೂಡಿಸುವ ಕಾಯ್ದೆ (ಆರ್‌ಎಫ್‌ಎ)’ ಮಸೂದೆಯನ್ನು ಮಂಡಿಸಿದರು.
ಫಿಲಿಪಿನೊ ವಿಶ್ವಯುದ್ಧ-2ರಲ್ಲಿ ಭಾಗಿಯಾಗಿದ್ದ ಸೈನಿಕರ ಮಕ್ಕಳಿಗೆ ವೀಸಾ ನೀಡುವ ಪ್ರಕ್ರಿಯೆ ತ್ವರಿತಗೊಳಿಸಲು ಒತ್ತು ನೀಡುವ ಮಸೂದೆಯನ್ನು ಸೆನೆಟ್ ಸದಸ್ಯೆ ಹಿರೊನೊ ಫಿಲಿಪಿನೊ ಮಂಡಿಸಿದರು.
‘ಪ್ರಸಕ್ತ ಸೆನೆಟ್‌ನಲ್ಲಿ ಇರುವ ಏಕಮಾತ್ರ ವಲಸಿಗ ಸದಸ್ಯ ನಾನು. ಈ ಮಸೂದೆ ಮಂಡಿಸಲು ಹೆಮ್ಮೆಯಾಗುತ್ತಿದೆ. ಈ ಮೂಲಕ ಕುಟುಂಬದ ಒಗ್ಗಟ್ಟಿಗೆ ಉತ್ತೇಜನ ನೀಡಲಾಗುತ್ತಿದೆ’ ಎಂದು ಹೇಳಿದರು.
ವಲಸಿಗರ ವ್ಯವಸ್ಥೆಯ ಆಮೂಲಾಗ್ರ ಸುಧಾರಣೆ ಅಗತ್ಯವಿದೆ. ಅದೇ ವೇಳೆ ಕುಟುಂಬಗಳ ಒಗ್ಗೂಡುವಿಕೆಯೂ ಸರಿದಾರಿಯಲ್ಲಿ ಇರಬೇಕು. ಎರಡರ ಸಮತೋಲನದ ಮೂಲಕ ವ್ಯವಸ್ಥೆ ರೂಪಿಸಬೇಕು ಎಂದರು.
ಮಲ ಮಕ್ಕಳು, ಎಲ್‌ಜಿಬಿಟಿಕ್ಯೂ ಸಮುದಾಯದವರಿಗೂ ಹೊಸ ಮಸೂದೆಯಿಂದ ಅನುಕೂಲವಾಗಲಿದೆ ಎಂದೂ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.