ADVERTISEMENT

ಅಮೆರಿಕ: ತಮಾಷೆಗಾಗಿ ಡೋರ್‌ ಬೆಲ್‌ ಬಾರಿಸಿದ ಹುಡುಗನಿಗೆ ಗುಂಡಿಟ್ಟು ಕೊಂದರು..

ಏಜೆನ್ಸೀಸ್
Published 1 ಸೆಪ್ಟೆಂಬರ್ 2025, 2:22 IST
Last Updated 1 ಸೆಪ್ಟೆಂಬರ್ 2025, 2:22 IST
   

ಹೂಸ್ಟನ್: ತಮಾಷೆ ಮಾಡಲೆಂದು ಡೋರ್‌ ಬೆಲ್‌ ಬಾರಿಸಿದ 11 ವರ್ಷದ ಬಾಲಕನ ಮೇಲೆ ಗುಂಡಿನ ದಾಳಿಯಾಗಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಮನೆಯ ಡೋರ್‌ ಬೆಲ್‌ ಬಾರಿಸಿ, ಮನೆಯವರು ಬಾಗಿಲು ತೆರೆಯುವ ಮುನ್ನವೇ ಅಲ್ಲಿಂದ ತಪ್ಪಿಸಿಕೊಂಡು ಹೋಗುವ ‘ಡಿಂಗ್ ಡಾಂಗ್ ಡಿಚಿಂಗ್’ ಎನ್ನುವ ಪ್ರ್ಯಾಂಕ್ ಮಾಡುವ ವೇಳೆ ಘಟನೆ ಜರುಗಿದೆ.

ಘಟನೆಯ ಕುರಿತು ತನಿಖೆ ಮಾಡಲಾಗುತ್ತಿದೆ. ಇದುವರೆಗೂ ಯಾರನ್ನೂ ಬಂಧಿಸಲಾಗಿಲ್ಲ. ಮೃತ ಬಾಲಕನ ಗುರುತು ಲಭ್ಯವಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ADVERTISEMENT

2023 ರಲ್ಲೂ ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ‘ಡಿಂಗ್ ಡಾಂಗ್ ಡಿಚಿಂಗ್’ಪ್ರ್ಯಾಂಕ್ ಮಾಡಿದ ಮೂವರು ಬಾಲಕರನ್ನು ವ್ಯಕ್ತಿಯೊಬ್ಬರು ಗುಂಡಿಟ್ಟು ಕೊಂದಿದ್ದರು. 2025ರ ಮೇ ತಿಂಗಳಲ್ಲೂ ಟಿಕ್‌ಟಾಕ್‌ ವಿಡಿಯೊಗಾಗಿ ಪ್ರ್ಯಾಂಕ್ ಮಾಡುತ್ತಿದ್ದ 18 ವರ್ಷದ ಹುಡುಗನ ಮೇಲೆ ಗುಂಡಿನ ದಾಳಿಯಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.