ಸಾವು (ಪ್ರಾತಿನಿಧಿಕ ಚಿತ್ರ)
ನ್ಯೂಯಾರ್ಕ್: ಅಮೆರಿಕದ ವಾಷಿಂಗ್ಟನ್‌ನಲ್ಲಿ ಭಾರತ ಮೂಲದ ಮೂವರು ಶವವಾಗಿ ಪತ್ತೆಯಾಗಿದ್ದಾರೆ.
ಏ.24ರಂದು ಗುಂಡಿನ ದಾಳಿ ನಡೆದಿದ್ದು, ಮೂವರು ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳ ವರದಿಗಳು ತಿಳಿಸಿವೆ.
ಮೃತರನ್ನು ಒಂದೇ ಕುಟುಂಬದವರು ಎನ್ನಲಾಗಿದ್ದು, ಹರ್ಷವರ್ಧನ್ ಕಿಕ್ಕೇರಿ (44), ಶ್ವೇತಾ ಪನ್ಯಮ್ (41) ಮತ್ತು ದ್ರುವ ಕಿಕ್ಕೇರಿ (14) ಎಂದು ಗುರುತಿಸಲಾಗಿದೆ. ಶ್ವೇತಾ ಮತ್ತು ದ್ರುವ ಅವರನ್ನು ಹತ್ಯೆ ಮಾಡಿದ ನಂತರ ಹರ್ಷವರ್ಧನ್ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಪೊಲೀಸರು ತಿಳಿಸಿರುವುದಾಗಿ ವರದಿಯಾಗಿದೆ.
ಭಾರತ ಮೂಲದ ಎಐ ಟೆಕ್ ಕಂಪನಿಯಲ್ಲಿ ಹರ್ಷವರ್ಧನ್ ಸಿಇಒ ಮತ್ತು ಸಿಟಿಒ ಆಗಿಯೂ ಶ್ವೇತಾ ಅವರು ಅಧ್ಯಕ್ಷೆಯಾಗಿಯೂ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ, ಆದರೆ ಈ ಬಗ್ಗೆ ಖಚಿತಪಡಿಸಿಕೊಳ್ಳಲು ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.