ADVERTISEMENT

ಉತ್ತರ ಕೊರಿಯಾ ಸ್ಟುಡಿಯೊಗೆ ಪರಿಕರ ಪೂರೈಕೆ: ಇಬ್ಬರಿಗೆ ಅಮೆರಿಕ ನಿರ್ಬಂಧ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2022, 14:39 IST
Last Updated 10 ಡಿಸೆಂಬರ್ 2022, 14:39 IST

ವಾಷಿಂಗ್ಟನ್: ಉತ್ತರ ಕೊರಿಯಾದ ಸರ್ಕಾರಿ ಸ್ವಾಮ್ಯದ ಅನಿಮೇಷನ್ ಸ್ಟುಡಿಯೊಗೆ ಪರಿಕರ ಪೂರೈಸಿದ ಆರೋಪದ ಮೇಲೆ ಭಾರತೀಯ ಪ್ರಜೆ ಸೇರಿದಂತೆ ಇಬ್ಬರು ವ್ಯಕ್ತಿಗಳು ಮತ್ತು ಏಳು ಘಟಕಗಳ ಮೇಲೆ ಅಮೆರಿಕ ನಿರ್ಬಂಧ ವಿಧಿಸಿದೆ.

ಅಂತರರಾಷ್ಟ್ರೀಯ ಭ್ರಷ್ಟಾಚಾರ ವಿರೋಧಿ ದಿನದ ಸಂದರ್ಭದಲ್ಲಿ ಮತ್ತು ಅಂತರರಾಷ್ಟ್ರೀಯ ಮಾನವ ಹಕ್ಕುಗಳ ದಿನದ ಮುನ್ನಾ ದಿನದಂದು ಅಮೆರಿಕ ಶುಕ್ರವಾರ ಈ ಕ್ರಮ ಕೈಗೊಂಡಿದೆ.

ಸರ್ಕಾರದ ಮೂಲಗಳ ಪ್ರಕಾರ, ಡಿಪಿಆರ್‌ಕೆ (ಡೆಮಾಕ್ರಟಿಕ್ ಪೀಪಲ್ಸ್ ರಿಪಬ್ಲಿಕ್ ಆಫ್ ಕೊರಿಯಾ) ಸರ್ಕಾರ ನಡೆಸುವ ಅನಿಮೇಷನ್ ಸ್ಟುಡಿಯೊ, ಎಸ್ಇಕೆ ಸ್ಟುಡಿಯೊಗೆ ಭೌತಿಕ ಬೆಂಬಲ ಒದಗಿಸಿದ್ದಕ್ಕಾಗಿ ಮತ್ತು ಅದರ ಪರವಾಗಿ ಕಾರ್ಯನಿರ್ವಹಿಸಿದ್ದಕ್ಕಾಗಿ ಈ ನಿರ್ಬಂಧ ವಿಧಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.