ADVERTISEMENT

ಅಮೆರಿಕದ ಲಾಸ್ ವೇಗಾಸ್‌ನಲ್ಲಿ ಶೂಟೌಟ್: ಮೂವರ ಸಾವು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 7 ಡಿಸೆಂಬರ್ 2023, 2:35 IST
Last Updated 7 ಡಿಸೆಂಬರ್ 2023, 2:35 IST
ಶ್ರೀನಿವಾಸ್ ಶೂಟೌಟ್; ಶಂಕಿತರು ವಶಕ್ಕೆ
ಶ್ರೀನಿವಾಸ್ ಶೂಟೌಟ್; ಶಂಕಿತರು ವಶಕ್ಕೆ   

ಲಾಸ್ ವೇಗಾಸ್ (ಅಮೆರಿಕ: ಅಮೆರಿಕದ ನೆವಾಡಾ ವಿಶ್ವವಿದ್ಯಾಲಯದ ಲಾಸ್ ವೇಗಾಸ್‌ ಕ್ಯಾಂಪಸ್‌ನಲ್ಲಿ ಗುಂಡಿನ ದಾಳಿ ನಡೆದಿದ್ದು, ಕನಿಷ್ಠ ಮೂವರು ಸಾವಿಗೀಡಾಗಿದ್ದಾರೆ. ಒಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಸಿಎನ್‌ಎನ್ ಬುಧವಾರ ವರದಿ ಮಾಡಿದೆ.

‘ನಮ್ಮ ತನಿಖಾಧಿಕಾರಿಗಳ ಪ್ರಕಾರ ಮೂವರು ಮೃತಪಟ್ಟಿದ್ದಾರೆ. ಮತ್ತೊಬ್ಬರ ಸ್ಥಿತಿ ಗಂಭೀರವಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶಂಕಿತ ಶೂಟರ್ ಸಹ ಮೃತಪಟ್ಟಿದ್ದಾನೆ’ಎಂದು ಲಾಸ್ ವೇಗಾಸ್ ಮೆಟ್ರೋಪಾಲಿಟನ್ ಪೊಲೀಸ್ ಇಲಾಖೆಯು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ.

ಗುಂಡಿನ ದಾಳಿಯ ನಂತರ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿರುವ ಕಟ್ಟಡಗಳ ತೆರವು ಕಾರ್ಯ ನಡೆಯುತ್ತಿದೆ ಎಂದು ಯೂನಿವರ್ಸಿಟಿ ಪೊಲೀಸ್ ಸರ್ವಿಸಸ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ.

ADVERTISEMENT

ಬುಧವಾರ, ವಿಶ್ವವಿದ್ಯಾಲಯದ ಲೀ ಬ್ಯುಸಿನೆಸ್ ಸ್ಕೂಲ್‌ನ ಬೀಮ್ ಹಾಲ್ ಬಳಿ ಕ್ಯಾಂಪಸ್‌ನಲ್ಲಿ ಶೂಟೌಟ್‌ ನಡೆದಿದ್ದು, ಹಲವರ ಮೃತಪಟ್ಟಿದ್ದಾರೆ ಎಂದು ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ಕೂಡಲೇ ಸ್ಪಂದಿಸಿದ ಪೊಲೀಸರು ಆನ್‌ಲೈನ್ ಪೋಸ್ಟ್ ಮೂಲಕ ಹೊರಗೆ ಬಾರದಂತೆ ಇತರರಿಗೆ ಸೂಚಿಸಿದ್ದರು.

ನಾನು ಹೊರಗೆ ಕುಳಿತು ಉಪಾಹಾರ ಸೇವಿಸುತ್ತಿದ್ದೆ. ಈ ಸಂದರ್ಭ ಮೂರು ಗುಂಡಿನ ಸದ್ದು ಕೇಳಿಸಿತು. ಗಾಬರಿಗೊಂಡೆ. ಮತ್ತೆರಡು ಭಾರಿ ಸದ್ದು ಕೇಳಿಸಿತು. ಕೂಡಲೇ ನೆಲಮಾಳಿಗೆಗೆ ಹೋಗಿ 20 ನಿಮಿಷ ಅಲ್ಲಿಯೇ ಇದ್ದೆ ಎಂದು ಒಬ್ಬ ವಿದ್ಯಾರ್ಥಿ ಸಿಎನ್‌ಎನ್‌ಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.