
ಪಿಟಿಐ
ನ್ಯೂಯಾರ್ಕ್: ಭಾರತದ ದೇಗುಲಗಳಿಂದ ಅಕ್ರಮವಾಗಿ ತೆರವುಗೊಂಡಿದ್ದ ಮೂರು ಪುರಾತನ ಕಂಚಿನ ವಿಗ್ರಹಗಳನ್ನು ಭಾರತಕ್ಕೆ ಮರಳಿಸಲು ಅಮೆರಿಕ ನಿರ್ಧರಿಸಿದೆ.
ಮೂರು ವಿಗ್ರಹಗಳನ್ನು ಭಾರತದ ದೇಗುಲಗಳಿಂದ ಅಕ್ರಮವಾಗಿ ತೆರವುಗೊಳಿಸಲಾಗಿತ್ತು ಎಂಬುದು ಸಂಶೋಧನೆಯ ಮೂಲಕ ಖಚಿತವಾಗಿರುವುದರಿಂದ ಅವುಗಳನ್ನು ಭಾರತ ಸರ್ಕಾರಕ್ಕೆ ನೀಡಲಾಗುತ್ತದೆ ಎಂದು ವಾಷಿಂಗ್ಟನ್‌ನಲ್ಲಿರುವ ನ್ಯಾಷನಲ್ ‘ಮ್ಯೂಸಿಯಂ ಆಫ್ ಏಷ್ಯನ್ ಆರ್ಟ್’ ಬುಧವಾರ ತಿಳಿಸಿದೆ.
ಚೋಳರ ಕಾಲದ (990ನೇ ಇಸವಿ) ‘ಶಿವ ನಟರಾಜ’ ವಿಗ್ರಹ, ಚೋಳರ ಕಾಲದ (12ನೇ ಶತಮಾನ) ‘ಸೋಮಸ್ಕಂದ’ ವಿಗ್ರಹ ಮತ್ತು ವಿಜಯನಗರ ಕಾಲದ (16ನೇ ಶತಮಾನ) ‘ಪರವಾಯಿ ಜೊತೆಗಿನ ಸಂತ ಸುಂದರಾರ್’ ವಿಗ್ರಹ ಭಾರತಕ್ಕೆ ಮರಳಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.