ADVERTISEMENT

ಹೋಳಿ ಹಬ್ಬದ ಶುಭ ಕೋರಿದ ಕಮಲಾ ಹ್ಯಾರಿಸ್

ಏಜೆನ್ಸೀಸ್
Published 29 ಮಾರ್ಚ್ 2021, 2:01 IST
Last Updated 29 ಮಾರ್ಚ್ 2021, 2:01 IST
ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್
ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್   

ವಾಷಿಂಗ್ಟನ್: ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್, ಭಾರತೀಯರು ಸೇರಿದಂತೆ ಸರ್ವರಿಗೂ ಹೋಳಿ ಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ.

ಈ ಹಬ್ಬವು ಸಕಾರಾತ್ಮಕತೆ ತುಂಬಲಿದೆ ಮತ್ತು ನಮ್ಮ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು, ಎಲ್ಲರೂ ಒಂದಾಗಬೇಕೆಂಬ ಸಂದೇಶವನ್ನು ಸಾರುತ್ತದೆ ಎಂದವರು ತಿಳಿಸಿದ್ದಾರೆ.

ಈ ಕುರಿತುಟ್ವೀಟ್ ಮಾಡಿರುವ ಕಮಲಾ ಹ್ಯಾರಿಸ್ 'ಹ್ಯಾಪಿ ಹೋಳಿ! ಹೋಳಿ ಹಬ್ಬವು ಸ್ನೇಹಿತರು ಹಾಗೂ ಪ್ರೀತಿಪಾತ್ರರಿಗೆ ಬಣ್ಣಗಳನ್ನು ಹಚ್ಚುವುದಕ್ಕೆ ಹೆಸರುವಾಸಿಯಾಗಿದೆ. ಹೋಳಿ ಸಂತೋಷದ ಹಬ್ಬವಾಗಿದ್ದು, ಸಕಾರಾತ್ಮಕತೆ ತುಂಬಲಿದೆ. ಈ ಕಠಿಣ ಸಂದರ್ಭದಲ್ಲಿ ವಿಶ್ವದ ಎಲ್ಲ ಸಮುದಾಯಗಳಿಗೂ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ನಾವೆಲ್ಲರೂ ಒಂದಾಗಬೇಕೆಂಬ ಸಂದೇಶವನ್ನು ಸಾರುತ್ತದೆ ಎಂದು ಉಲ್ಲೇಖಿಸಿದ್ದಾರೆ.

ADVERTISEMENT

ಹೋಳಿ ಹಬ್ಬವನ್ನು ಮಾರ್ಚ್ 28 ಹಾಗೂ 29ರಂದು ಆಚರಿಸಲಾಗುತ್ತದೆ. ಹಿಂದೂ ಧರ್ಮದ ಪ್ರಮುಖ ಹಬ್ಬವಾದರೂ ಇತರೆ ಧರ್ಮದ ಜನರು ಇದನ್ನು ಆಚರಿಸುತ್ತಾರೆ. ಇದು ದೇಶದಲ್ಲಿ ವಸಂತ ಸುಗ್ಗಿಯ ಋತುವಿನ ಆಗಮನವನ್ನು ಸೂಚಿಸುತ್ತದೆ.

ಭಾರತ ಸಂಜಾತೆ 56 ವರ್ಷದ ಕಮಲಾ ಹ್ಯಾರಿಸ್ ಹೊಸ ವರ್ಷಾರಂಭದಲ್ಲಿ ಅಮೆರಿಕದ 49ನೇ ಉಪಾಧ್ಯಕ್ಷೆಯಾಗಿ ಅಧಿಕಾರ ಸ್ವೀಕರಿಸಿದ್ದರು. ಅಮೆರಿಕ ಉಪಾಧ್ಯಕ್ಷೆ ಅಲಂಕರಿಸುತ್ತಿರುವ ದಕ್ಷಿಣ ಏಷ್ಯಾದ ಮೊದಲ ಉಪಾಧ್ಯಕ್ಷೆ ಮತ್ತು ಮೊದಲ ಕಪ್ಪುವರ್ಣೀಯ ವ್ಯಕ್ತಿ ಎಂಬ ಹಿರಿಮೆಗೆ ಪಾತ್ರವಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.