ADVERTISEMENT

H-1B ವೀಸಾಗೆ ದುಬಾರಿ ಶುಲ್ಕ: ಅಮೆರಿಕದ ನಡೆ ಬಗ್ಗೆ ಪ್ರತಿಕ್ರಿಯಿಸಲು ಚೀನಾ ನಕಾರ

ಪಿಟಿಐ
Published 22 ಸೆಪ್ಟೆಂಬರ್ 2025, 14:06 IST
Last Updated 22 ಸೆಪ್ಟೆಂಬರ್ 2025, 14:06 IST
<div class="paragraphs"><p>ಅಮೆರಿಕ– ಚೀನಾ&nbsp;&nbsp;</p></div>

ಅಮೆರಿಕ– ಚೀನಾ  

   

ಬೀಜಿಂಗ್‌ : ಎಚ್‌–1ಬಿ ವೀಸಾ ಪಡೆಯಲು ದುಬಾರಿ ಶುಲ್ಕ ವಿಧಿಸಿರುವ ಅಮೆರಿಕದ ನಡೆಯ ಬಗ್ಗೆ ಪ್ರತಿಕ್ರಿಯಿಸಲು ಚೀನಾ ನಿರಾಕರಿಸಿದೆ. ಆದರೆ, ಇದೇ ಸಂದರ್ಭದಲ್ಲಿ ಜಾಗತಿಕ ವೃತ್ತಿಪರರನ್ನು ಅದು ಆಹ್ವಾನಿಸಿದೆ.

ಈ ಮಧ್ಯೆ, ಮುಂದಿನ ತಿಂಗಳಿನಿಂದ ನೂತನ ಉದ್ಯೋಗ ವೀಸಾ (ಕೆ–ವೀಸಾ) ವಿತರಿಸಲು ಅದು ಸಿದ್ಧತೆ ನಡೆಸಿದೆ.

ADVERTISEMENT

ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಗುವೋ ಜ್ಯಾಕೂನ್‌ ಅವರು ‘ಅಮೆರಿಕದ ವೀಸಾ ನೀತಿ ಬಗ್ಗೆ ಚೀನಾ ಪ್ರತಿಕ್ರಿಸುವುದಿಲ್ಲ’ ಎಂದು ಹೇಳಿದರು.

ಜಾಗತೀಕರಣದ ಸಂದರ್ಭದಲ್ಲಿ ವೃತ್ತಿಪರ ಪ್ರತಿಭಾನ್ವಿತರು ಜಾಗತಿಕ ತಾಂತ್ರಿಕ ಮತ್ತು ಆರ್ಥಿಕ ಪ್ರಗತಿಗೆ ಉತ್ತೇಜನ ನೀಡುತ್ತಾರೆ. ಈ ನಿಟ್ಟಿನಲ್ಲಿ ಚೀನಾ ದೇಶವು ಜಾಗತಿಕ ವೃತ್ತಿಪರ ಪ್ರತಿಭೆಗಳನ್ನು ಆಹ್ವಾನಿಸುತ್ತದೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.