ADVERTISEMENT

ಭಾರತೀಯ ವಿಜ್ಞಾನಿಗೆ ಕ್ರಾಫೂರ್ಡ್ ಪ್ರಶಸ್ತಿ

ಪಿಟಿಐ
Published 2 ಫೆಬ್ರುವರಿ 2026, 15:36 IST
Last Updated 2 ಫೆಬ್ರುವರಿ 2026, 15:36 IST
ವೀರಭದ್ರನ್‌ ರಾಮನಾಥನ್‌
ವೀರಭದ್ರನ್‌ ರಾಮನಾಥನ್‌   

ಹ್ಯೂಸ್ಟನ್‌: ಭಾರತ ಮೂಲದ ಹವಾಮಾನ ವಿಜ್ಞಾನಿ ವೀರಭದ್ರನ್‌ ರಾಮನಾಥನ್‌ (82) ಅವರಿಗೆ ಭೂ ವಿಜ್ಞಾನ ಕ್ಷೇತ್ರದಲ್ಲಿನ ಕೊಡುಗೆಗಾಗಿ 2026ನೇ ಸಾಲಿನ ಪ್ರತಿಷ್ಠಿತ ಕ್ರಾಫೂರ್ಡ್ ಪ್ರಶಸ್ತಿ ಸಂದಿದೆ.

ಅಮೆರಿಕದ ರಾಯಲ್‌ ಸ್ವೆಡಿಶ್‌ ಅಕಾಡೆಮಿ ನೀಡುವ ಈ ಪ್ರಶಸ್ತಿಗೆ ‘ಭೂ ವಿಜ್ಞಾನದ ನೊಬೆಲ್‌’ ಪ್ರಶಸ್ತಿ ಎಂಬ ಖ್ಯಾತಿಯೂ ಇದೆ.

ಜಾಗತಿಕ ತಾಪಮಾನ ಏರಿಕೆಯನ್ನು ಅರ್ಥೈಸಿಕೊಳ್ಳುವ ನಿಟ್ಟಿನಲ್ಲಿ ಅತಿ ಮಾಲಿನ್ಯಕಾರಕಗಳು ಹಾಗೂ ವಾತಾವರಣದ ಕಂದು ಮೋಡಗಳ ಬಗ್ಗೆ ದಶಕಗಳಿಂದ ನಡೆಸಿದ ಸಂಶೋಧನೆಗಾಗಿ ರಾಮನಾಥನ್‌ ಅವರಿಗೆ ಈ ಪ್ರಶಸ್ತಿ ಸಂದಿದೆ. ಇದು 9ಲಕ್ಷ ಡಾಲರ್  (₹8.24 ಕೋಟಿ) ನಗದು ಬಹುಮಾನವನ್ನೂ ಒಳಗೊಂಡಿದೆ.

ADVERTISEMENT

1975ರಲ್ಲಿ ನಾಸಾದಲ್ಲಿ ಸೇವೆ ಸಲ್ಲಿಸುತ್ತಿದ್ದ ವೇಳೆ, ರೆಫ್ರಿಜೆರೇಟರ್‌ಗಳಲ್ಲಿ ಬಳಸುವ ಕ್ಲೋರೊಫ್ಲೋರೊ ಕಾರ್ಬನ್ (ಸಿಎಫ್‌ಸಿಎಸ್‌) ಅಂಶವು ಕಾರ್ಬನ್‌ ಡೈಆಕ್ಸೈಡ್‌ಗಿಂತಲೂ 10 ಸಾವಿರ ಪಟ್ಟು ಹೆಚ್ಚು ತಾಪಮಾನ ಹೆಚ್ಚಳಕ್ಕೆ ಕಾರಣವಾಗುತ್ತದೆ ಎಂದು ಸಂಶೋಧಿಸುವ ಮೂಲಕ ರಾಮನಾಥನ್ ಜಗತ್ತಿನ ಗಮನ ಸೆಳೆದಿದ್ದರು. 

ತಮಿಳುನಾಡಿನ ಮದುರೈನಲ್ಲಿ ಜನಿಸಿದ ಇವರು, ಅಣ್ಣಮಲೈ ವಿಶ್ವವಿದ್ಯಾಲಯ,ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಸೈನ್ಸ್‌ (ಐಐಎಸ್‌)ನಿಂದ ಪದವಿ ಪಡೆದಿದ್ದು, ಸಿಕಂದರಾಬಾದ್‌ನ ರೆಫ್ರೆಜೆರೇಟರ್‌ ಕಾರ್ಖಾನೆಯೊಂದರಲ್ಲಿ ಎಂಜಿನಿಯರ್‌ ಆಗಿ ತಮ್ಮ ವೃತ್ತಿ ಜೀವನ ‍ಪ್ರಾರಂಭಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.