ಕಾಬೂಲ್: ಕಾಬೂಲ್‌ನ ಹಮೀದ್ ಕರ್ಝಾಯಿ ವಿಮಾನ ನಿಲ್ದಾಣದಲ್ಲಿ ನೀರು–ಆಹಾರದ ಬೆಲೆ ಗಗನಕ್ಕೇರಿದ್ದು, ಬಡವರು, ಮಧ್ಯಮ ವರ್ಗದವರು ಹಸಿವಿನಿಂದ ಪರಿತಪಿಸುವಂತಾಗಿದೆ.
ಕಾಬೂಲ್ ವಿಮಾನ ನಿಲ್ದಾಣದಲ್ಲಿ ಬಾಟಲಿ ನೀರನ್ನು 40 ಡಾಲರ್ (₹3,000)ಗೆ ಮಾರಲಾಗುತ್ತಿದೆ. ಒಂದು ಪ್ಲೇಟ್ ಅನ್ನಕ್ಕಾಗಿ 100 ಡಾಲರ್ (₹7,400) ಕೇಳಲಾಗುತ್ತಿದೆ,’ ಎಂದು ಅಫ್ಗನ್ ನಾಗರಿಕರೊಬ್ಬರು ಸುದ್ದಿ ಸಂಸ್ಥೆ ರಾಯಿಟರ್ಸ್‌ಗೆ ನೋವಿನಿಂದ ಹೇಳಿದ್ದಾರೆ.
‘ಸಾಮಾನ್ಯ ನಾಗರಿಕರಿಗೆ ಕಾಬೂಲ್‌ನಲ್ಲಿ ನೀರು, ಆಹಾರ ಎಂಬುದೇ ಕೈಗೆಟುಕದಂತೆ ಆಗಿದೆ,‘ ಎಂದು ಜನ ದುಃಖ ವ್ಯಕ್ತಪಡಿಸಿದ್ದಾರೆ.
ಅಫ್ಗಾನಿಸ್ತಾನವನ್ನು ತಾಲಿಬಾನ್ ಉಗ್ರರು ವಶಕ್ಕೆ ಪಡೆದಿರುವ ಹಿನ್ನೆಲೆಯಲ್ಲಿ, ಸಾವಿರಾರು ಸಂಖ್ಯೆಯ ಜನ ದೇಶ ತೊರೆಯುತ್ತಿದ್ದಾರೆ. ಹೀಗಾಗಿ ಕಾಬೂಲ್ ವಿಮಾನ ನಿಲ್ದಾಣದಲ್ಲಿ ನಿತ್ಯ ಜನ ಜಂಗುಳಿ ಉಂಟಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.