ADVERTISEMENT

ಬ್ರಿಟನ್‌ ರಾಜ 3ನೇ ಚಾರ್ಲ್ಸ್‌ ಪಟ್ಟಾಭಿಷೇಕ ಹೇಗಿರಲಿದೆ? 

ಪ್ರಜಾವಾಣಿ ವಿಶೇಷ
Published 6 ಮೇ 2023, 3:13 IST
Last Updated 6 ಮೇ 2023, 3:13 IST
ರಾಣಿ ಕ್ಯಾಮಿಲ್ಲಾ ಹಾಗೂ ರಾಜ 3ನೇ ಚಾರ್ಲ್ಸ್‌  –ಎಎಫ್‌ಪಿ ಚಿತ್ರ
ರಾಣಿ ಕ್ಯಾಮಿಲ್ಲಾ ಹಾಗೂ ರಾಜ 3ನೇ ಚಾರ್ಲ್ಸ್‌  –ಎಎಫ್‌ಪಿ ಚಿತ್ರ   

ಬ್ರಿಟನ್‌ ರಾಜ 3ನೇ ಚಾರ್ಲ್ಸ್‌ ಪಟ್ಟಾಭಿಷೇಕ ಸಮಾರಂಭವು ಇಂದು ವೈಭವೋಪೇತವಾಗಿ ನಡೆಯಲಿದ್ದು, ಸಾವಿರಾರು ಸಂಖ್ಯೆಯಲ್ಲಿ ಗಣ್ಯಾತಿಗಣ್ಯರ ದಂಡೇ ಇಲ್ಲಿನ ಬಕಿಂಗ್‌ಹ್ಯಾಮ್‌ ಅರಮನೆಗೆ ಹರಿದು ಬಂದಿದೆ.

ಲಂಡನ್‌ ಕೇಂದ್ರಭಾಗದಲ್ಲಿನ ಬಕಿಂಗ್‌ಹ್ಯಾಮ್‌ ಅರಮನೆಯಿಂದ ವೆಸ್ಟ್‌ಮಿನ್‌ಸ್ಟರ್‌ ಅಬೆವರೆಗೆ (ಎರಡು ಕಿ.ಮೀ) ರಾಜನ ವೈಭವದ ಮೆರವಣಿಗೆಯೊಂದಿಗೆ ಬೆಳಿಗ್ಗೆ 10.20ಕ್ಕೆ (ಭಾರತೀಯ ಕಾಲಮಾನ) ಕಾರ್ಯಕ್ರಮ ಪ್ರಾರಂಭವಾಗಲಿದೆ. 

ಬಕಿಂಗ್‌ಹ್ಯಾಮ್‌ ಅರಮನೆ

ಆರು ಕುದುರೆಗಳ ಸಾರೋಟಿನಲ್ಲಿ ರಾಜ ದಂಪತಿಯನ್ನು ಪಟ್ಟಾಭಿಷೇಕದ ಸ್ಥಳಕ್ಕೆ ಕರೆದೊಯ್ಯಲಾಗುತ್ತದೆ. ಈ ಹೊತ್ತಿನಲ್ಲಿ ಸಾರೋಟಿಗೆ ರಾಜನ ಅಂಗರಕ್ಷಕ ಪಡೆಯು ಬೆಂಗಾವಲು ಒದಗಿಸಲಿದೆ.

ಆಶ್ವ ಪಡೆ

11 ಗಂಟೆಗೆ ಪಟ್ಟಾಭಿಷೇಕ ಕಾರ್ಯಕ್ರಮ ಶುರುವಾಗಲಿದೆ.

ಚಾರ್ಲ್ಸ್‌, ಕ್ಯಾಮಿಲ್ಲಾ

ಇಂಗ್ಲೆಂಡ್‌ನ ಕ್ಯಾಂಟರ್‌ಬರಿ ಚರ್ಚ್‌ನ ಆರ್ಚ್‌ ಬಿಷಪ್‌ ಜಸ್ಟಿನ್‌ ವೆಲ್ಬಿ ನೇತೃತ್ವದಲ್ಲಿ 12 ಗಂಟೆಗೆ ಸರಿಯಾಗಿ 3ನೇ ಚಾರ್ಲ್ಸ್‌ ಅವರಿಗೆ ರಾಜನ ಕಿರೀಟ ಧಾರಣೆ ಮಾಡಲಾಗುತ್ತದೆ. ಆರ್ಚ್‌ ಬಿಷಪ್‌ ಅವರು ರಾಜನಿಗೆ ಪ್ರತಿಜ್ಞಾ ವಿಧಿ ಬೋಧಿಸಲಿದ್ದಾರೆ.

ಸೇನಾ ಪಡೆ ತಾಲೀಮು

ಪಟ್ಟಾಭಿಷೇಕದ ವೇಳೆ ಚಾರ್ಲ್ಸ್‌ ಅವರನ್ನು 1300ರಲ್ಲಿ ರೂಪಿಸಲಾದ ಸಿಂಹಾಸನದ ಮೇಲೆ ಆಸೀನಗೊಳಿಸಲಾಗುತ್ತದೆ. ಈ ಸಿಂಹಾಸನವನ್ನು ಮೊದಲನೇ ಕಿಂಗ್‌ ಎಡ್ವರ್ಡ್‌ ಸ್ಲಾಟ್ಲೆಂಡ್‌ ಸಾಮ್ರಾಜ್ಯ ವಶಪಡಿಸಿಕೊಂಡ ಸಂಕೇತವಾಗಿ ನೋಡಲಾಗುತ್ತದೆ.

ಚಾರ್ಲ್ಸ್‌, ಕ್ಯಾಮಿಲ್ಲಾ

ಇದೇ ವೇಳೆ ಪ್ರತ್ಯೇಕ ಸರಳ ಸಮಾರಂಭದಲ್ಲಿ ಕ್ಯಾಮಿಲ್ಲಾ ಕೂಡ ರಾಣಿಯಾಗಿ ಕಿರೀಟ ಧರಿಸಲಿದ್ದಾರೆ.

ಕ್ಯಾಮಿಲ್ಲಾ

ಪಟ್ಟಾಭಿಷೇಕ ಮುಗಿದ ನಂತರ  ರಾಜ ಮತ್ತು ರಾಣಿ ಇಬ್ಬರೂ ಚಿನ್ನದ ಸಾರೋಟಿನಲ್ಲಿ ಬೃಹತ್‌ ಮೆರವಣಿಗೆಯಲ್ಲಿ ಬಕಿಂಗ್‌ಹ್ಯಾಮ್‌ ಅರಮನೆಗೆ ಹಿಂತಿರುಗಲಿದ್ದಾರೆ.

ಪಟ್ಟಾಭಿಷೇಕ ಆಗಮಿಸಿರುವ ಗಣ್ಯರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.