ADVERTISEMENT

ಕೋವಿಡ್‌ ಪಿಡುಗು 2 ವರ್ಷಗಳ ಒಳಗೆ ಅಂತ್ಯವಾಗುವ ವಿಶ್ವಾಸ ವ್ಯಕ್ತಪಡಿಸಿದ WHO

ರಾಯಿಟರ್ಸ್
Published 22 ಆಗಸ್ಟ್ 2020, 3:31 IST
Last Updated 22 ಆಗಸ್ಟ್ 2020, 3:31 IST
ಟೆಡ್ರೊಸ್ ಅದಾನೊಮ್ ಗೆಬ್ರೆಯೆಸಸ್
ಟೆಡ್ರೊಸ್ ಅದಾನೊಮ್ ಗೆಬ್ರೆಯೆಸಸ್    

ಜಿನಿವಾ: ನೂರ ಎರಡು ವರ್ಷಗಳ ಹಿಂದೆ, 1918ರಲ್ಲಿ ಕಾಣಿಸಿಕೊಂಡಿದ್ದ ಸ್ಪ್ಯಾನಿಷ್‌ ಜ್ವರ ಎರಡು ವರ್ಷಗಳ ಕಾಲ ಜಗತ್ತನ್ನು ಕಾಡಿತ್ತು. ಈಗ ಒಂದು ವೇಳೆ, ಲಸಿಕೆ ಪತ್ತೆಹಚ್ಚಲು ಜಗತ್ತು ಒಗ್ಗೂಡಿ ಯಶಸ್ವಿಯಾದರೆ, ಕೊರೊನಾ ವೈರಸ್‌ ಪಿಡುಗು ಎರಡು ವರ್ಗಗಳಿಗಿಂತಲೂ ಕಡಿಮೆ ಅವಧಿಯಲ್ಲಿ ಕೊನೆಗೊಳ್ಳಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೊಸ್ ಅದಾನೊಮ್ ಗೆಬ್ರೆಯೆಸಸ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸಾಬೀತಾಗದ ಯಾವುದೇ ಲಸಿಕೆ ಇಲ್ಲದ ಹೊತ್ತಿನಲ್ಲಿ ಸಾಂಕ್ರಾಮಿಕ ರೋಗವು ಎಷ್ಟು ಬೇಗ ನಿಯಂತ್ರಣಕ್ಕೆ ಬರಬಹುದು ಎಂಬುದರ ಬಗ್ಗೆ ಮಾಹಿತಿ ನೀಡುವ ವಿಷಯದಲ್ಲಿ ಆರೋಗ್ಯ ಸಂಸ್ಥೆ ಯಾವಾಗಲೂ ಜಾಗರೂಕವಾಗಿರುತ್ತದೆ ಎಂದೂ ಟೆಡ್ರೊಸ್‌ ಹೇಳಿದರು‌.

‘1918ರಲ್ಲಿ ಕಾಣಿಸಿಕೊಂಡಿದ್ದ ಸ್ಪ್ಯಾನಿಷ್‌ ಜ್ವರ ಅಂತ್ಯವಾಗಲು 2 ವರ್ಷಗಳೇ ಬೇಕಾದವು. ಸದ್ಯದ ಮಾಹಿತಿ ತಂತ್ರಜ್ಞಾನದ ಈ ಯುಗದಲ್ಲಿ, ವಿಶ್ವದೊಂದಿಗೆ ಹೆಚ್ಚು ಸಂಪರ್ಕ ಇರುವುದರಿಂದ ಕೊರೊನಾ ವೈರಸ್‌ ಬೇಗನೇ ವ್ಯಾಪಿಸುತ್ತಿದೆ. ನಾವೆಲ್ಲರೂ ಪರಸ್ಪರ ಬೆಸೆದುಕೊಂಡಿರುವ ಕಾರಣಕ್ಕೆ ಅದು ಹೆಚ್ಚು ಹರಡಿದೆ,’ ಎಂದು ಅವರು ಜಿನಿವಾದಲ್ಲಿ ಹೇಳಿದ್ದಾರೆ.

ADVERTISEMENT

‘ಅದೇ ಹೊತ್ತಿನಲ್ಲೇ ಕೊರೊನಾ ವೈರಸ್‌ ಅನ್ನು ತಡೆಯುವ ತಂತ್ರಜ್ಞಾನ ಮತ್ತು ಜ್ಞಾನ ನಮ್ಮ ಬಳಿ ಇದೆ. ಹೀಗಾಗಿ ಜಾಗತೀಕರಣ, ಜಾಗತಿಕ ಸಂಪರ್ಕಗಳು ನಮಗೆ ವರದಾನವಾಗಿದೆ. ಹೀಗಾಗಿ ನಾವು ಎರಡು ವರ್ಷಗಳಿಗಿಂತಲೂ ಕಡಿಮೆ ಅವಧಿಯಲ್ಲಿ ವೈರಸ್‌ ಅನ್ನು ಅಂತ್ಯಗೊಳಿಸಬಹುದು,’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
‘ಜಗತ್ತು ಈಗ ಒಗ್ಗಟ್ಟಾಗಬೇಕು. ಲಭ್ಯವಿರುವ ಪರಿಕರಗಳನ್ನು ಸಮರ್ಥವಾಗಿ ಬಳಸಿಕೊಂಡು, ಲಸಿಕೆಯಂತಹ ಸಾಧನಗಳನ್ನು ನಾವು ಹೊಂದಬೇಕಾದ ಅಗತ್ಯವಿದೆ,’ ಎಂದು ಅವರು ಸಂದೇಶ ನೀಡಿದ್ದಾರೆ.

ಸದ್ಯ ಜಗತ್ತಿನ 2,28,68,238 ಮಂದಿಗೆ ಕೊರೊನಾ ವೈರಸ್‌ ತಗುಲಿದ್ದು, ಈ ಪೈ 7,97,871 ಮಂದಿ ಮೃತಪಟ್ಟಿದ್ದಾರೆ. 1,57,09,677 ಮಂದಿ ಗುಣಮುಖರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.