ADVERTISEMENT

WHOದಿಂದ ಅಮೆರಿಕ ಹೊರಕ್ಕೆ; ವೆಚ್ಚ ನಿಯಂತ್ರಣಕ್ಕೆ ಮುಂದಾದ ಮುಖ್ಯಸ್ಥ

ರಾಯಿಟರ್ಸ್
Published 24 ಜನವರಿ 2025, 10:59 IST
Last Updated 24 ಜನವರಿ 2025, 10:59 IST
<div class="paragraphs"><p>ಡಬ್ಲ್ಯುಎಚ್ಒ ಮಹಾನಿರ್ದೇಶಕ ಟೆಡ್ರೋಸ್‌ ಅಧಾನಮ್‌ ಗೆಬ್ರೆಯೆಸಸ್‌</p></div>

ಡಬ್ಲ್ಯುಎಚ್ಒ ಮಹಾನಿರ್ದೇಶಕ ಟೆಡ್ರೋಸ್‌ ಅಧಾನಮ್‌ ಗೆಬ್ರೆಯೆಸಸ್‌

   

ರಾಯಿಟರ್ಸ್ ಚಿತ್ರ

ಜಿನೀವಾ: ವಿಶ್ವ ಆರೋಗ್ಯ ಸಂಸ್ಥೆಯಿಂದ (ಡಬ್ಲ್ಯುಎಚ್ಒ) ಹೊರ ನಡೆಯುವುದಾಗಿ ಅಮೆರಿಕ ಘೋಷಿಸಿದ ಬೆನ್ನಲ್ಲೇ, ವೆಚ್ಚ ನಿಯಂತ್ರಣ ಹಾಗೂ ಆದ್ಯತೆಗಳ ಮರುಹೊಂದಾಣಿಕೆಗೆ ಡಬ್ಲ್ಯುಎಚ್ಒ ಮುಖ್ಯಸ್ಥ ಮುಂದಾಗಿದ್ದಾರೆ.

ADVERTISEMENT

ಕೋವಿಡ್–19 ಸಾಂಕ್ರಾಮಿಕ ಹಾಗೂ ಇತರ ಆರೋಗ್ಯ ಬಿಕ್ಕಟ್ಟುಗಳನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ಡಬ್ಲ್ಯುಎಚ್ಒ ವಿಫಲವಾಗಿದೆ ಎಂದು ಆರೋಪಿಸಿರುವ ಡೊನಾಲ್ಡ್‌ ಟ್ರಂಪ್‌, ಅಮೆರಿಕ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದ ದಿನವೇ (ಜನವರಿ 20ರಂದು) ಡಬ್ಲ್ಯುಎಚ್ಒನಿಂದ ಹೊರಗುಳಿಯುವುದಾಗಿ ಘೋಷಿಸಿದ್ದರು.

'ಈ ಘೋಷಣೆಯು ನಮ್ಮ ಆರ್ಥಿಕ ಪರಿಸ್ಥಿತಿಯನ್ನು ಮತ್ತಷ್ಟು ತೀವ್ರಗೊಳಿಸಿದೆ' ಎಂದು ಡಬ್ಲ್ಯುಎಚ್ಒ ಮಹಾನಿರ್ದೇಶಕ ಟೆಡ್ರೋಸ್‌ ಅಧಾನಮ್‌ ಗೆಬ್ರೆಯೆಸಸ್‌ ಅವರು ಜನವರಿ 23ರಂದು ಸಿಬ್ಬಂದಿಗೆ ಕಳುಹಿಸಿರುವ ಸುತ್ತೋಲೆಯಲ್ಲಿ ತಿಳಿಸಿದ್ದಾರೆ.

ಪ್ರಯಾಣ ವೆಚ್ಚಗಳನ್ನು ಗಣನೀಯವಾಗಿ ತಗ್ಗಿಸುವುದು, ವೆಚ್ಚ ನಿಯಂತ್ರಣದ ಭಾಗವಾಗಿ ಹೊಸ ನೇಮಕಾತಿಯನ್ನು ನಿಲ್ಲಿಸಲು ಹಾಗೂ ಆದ್ಯತೆಗಳನ್ನು ಮರುಹೊಂದಾಣಿಕೆ ಮಾಡಲು ಯೋಜಿಸಿರುವುದಾಗಿಯೂ ಉಲ್ಲೇಖಿಸಿದ್ದಾರೆ.

ಸುತ್ತೋಲೆಯನ್ನು ಅಧಿಕೃತ ಎಂದು ಖಚಿತಪಡಿಸಿರುವ ಡಬ್ಲ್ಯುಎಚ್‌ಒ ವಕ್ತಾರರು, ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿದ್ದಾರೆ.

2026ರ ಜನವರಿ 22ರ ವೇಳೆಗೆ ಅಮೆರಿಕ ಹೊರ ಹೋಗಲಿದೆ ಎಂಬುದನ್ನು ವಿಶ್ವಸಂಸ್ಥೆ ಗುರುವಾರ ಸ್ಪಷ್ಟಪಡಿಸಿದೆ.

ಅಮೆರಿಕವು ಡಬ್ಲ್ಯುಎಚ್‌ಒಗೆ ಅತಿಹೆಚ್ಚು ಆರ್ಥಿಕ ನೆರವು ನೀಡುವ ರಾಷ್ಟ್ರವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.