ADVERTISEMENT

ಕಳೆದ ವಾರ ವಿಶ್ವದಾದ್ಯಂತ ದಾಖಲೆ ಪ್ರಮಾಣದ ಕೋವಿಡ್ ಪ್ರಕರಣ ಪತ್ತೆ: ಡಬ್ಲ್ಯುಎಚ್‌ಒ

ಏಜೆನ್ಸೀಸ್
Published 22 ಸೆಪ್ಟೆಂಬರ್ 2020, 13:47 IST
Last Updated 22 ಸೆಪ್ಟೆಂಬರ್ 2020, 13:47 IST
ವಿಶ್ವ ಆರೋಗ್ಯ ಸಂಸ್ಥೆ
ವಿಶ್ವ ಆರೋಗ್ಯ ಸಂಸ್ಥೆ   

ಜಿನೆವಾ: ಕಳೆದ ವಾರ ವಿಶ್ವದಾದ್ಯಂತ ದಾಖಲೆಯ ಕೊರೊನಾ ವೈರಸ್ ಸೋಂಕು ಪ್ರಕರಣಗಳು ಪತ್ತೆಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ವರದಿ ಮಾಡಿದೆ. ಈ ಅವಧಿಯಲ್ಲಿ ಸುಮಾರು 2 ಮಿಲಿಯನ್ ಸೋಂಕಿತರು ಪತ್ತೆಯಾಗಿದ್ದಾರೆ.

ಸೆಪ್ಟೆಂಬರ್ 14 ರಿಂದ 20ರ ಅವಧಿಯಲ್ಲಿ ಸುಮಾರು ಎರಡು ಮಿಲಿಯನ್ ಹೊಸ ಕೋವಿಡ್-19 ಪ್ರಕರಣಗಳು ಪತ್ತೆಯಾಗಿವೆ. ಇದು ಹಿಂದಿನ ವಾರಕ್ಕೆ ಹೋಲಿಸಿದರೆ ಶೇ 6ರಷ್ಟು ಹೆಚ್ಚಳವಾಗಿದೆ ಮತ್ತು ಕೋವಿಡ್-19 ಪ್ರಾರಂಭವಾದಾಗಿನಿಂದಲೂ ವಾರದಲ್ಲಿ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿದೆ. ಇದೇ ಅವಧಿಯಲ್ಲಿ, ಸಾವಿನ ಸಂಖ್ಯೆಯಲ್ಲಿ ಶೇ 10 ರಷ್ಟು ಇಳಿಕೆ ಕಂಡುಬಂದಿದ್ದು, ಕಳೆದ ಏಳು ದಿನಗಳಲ್ಲಿ 36,764 ಸಾವುಗಳು ವರದಿಯಾಗಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆಯು ತಿಳಿಸಿದೆ.

ನಿರ್ದಿಷ್ಟವಾಗಿ ಹೇಳುವುದಾದರೆ, ಆಫ್ರಿಕಾವನ್ನು ಹೊರತುಪಡಿಸಿ ವಿಶ್ವದ ಇತರೆ ಪ್ರದೇಶಗಳಲ್ಲಿ ಕಳೆದ ಏಳು ದಿನಗಳಲ್ಲಿ ಪ್ರಕರಣಗಳ ಪ್ರಮಾಣ ಹೆಚ್ಚಾಗಿದೆ. ಅಮೆರಿಕದಲ್ಲಿ ಕೋವಿಡ್-19 ಪ್ರಕರಣಗಳು ಜಾಸ್ತಿಯಾಗುತ್ತಲೇ ಇದೆ ಮತ್ತು ಕಳೆದ ವಾರದಲ್ಲಿ ವರದಿಯಾದ ಎಲ್ಲಾ ಹೊಸ ಪ್ರಕರಣಗಳಲ್ಲಿ ಶೇ 38 ಕ್ಕಿಂತ ಹೆಚ್ಚಿನ ಪ್ರಕರಣಗಳು ಇಲ್ಲಿಯೇ ವರದಿಯಾಗಿವೆ.

ADVERTISEMENT

ಈಮಧ್ಯೆ, ಯುರೋಪ್‌ನಲ್ಲಿ ಕಳೆದ ವಾರದಲ್ಲಿ ಹೆಚ್ಚಿನ ಸಾವುನೋವುಗಳು ಸಂಭವಿಸಿವೆ. ಹಿಂದಿನ ವಾರಕ್ಕೆ ಹೋಲಿಸಿದರೆ ಶೇ 27ರಷ್ಟು ಸಾವುಗಳು ಹೆಚ್ಚಳವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.