ADVERTISEMENT

ಸ್ಪೇನ್‌ ಪ್ರಧಾನಿ ಪತ್ನಿಗೆ ಕೊರೊನಾ ವೈರಸ್ ಸೋಂಕು

ಏಜೆನ್ಸೀಸ್
Published 15 ಮಾರ್ಚ್ 2020, 9:17 IST
Last Updated 15 ಮಾರ್ಚ್ 2020, 9:17 IST
ಸ್ಪೇನ್ ಪ್ರಧಾನಿ ಪೆಡ್ರೊ ಸಾನ್‌ಚೆಝ್ ಮತ್ತು ಅವರ ಪತ್ನಿ ಬೆಗೊನಾ ಗೊಮೇಜ್
ಸ್ಪೇನ್ ಪ್ರಧಾನಿ ಪೆಡ್ರೊ ಸಾನ್‌ಚೆಝ್ ಮತ್ತು ಅವರ ಪತ್ನಿ ಬೆಗೊನಾ ಗೊಮೇಜ್   

ಮ್ಯಾಡ್ರಿಡ್: ಸ್ಪೇನ್‌ನಲ್ಲಿಕೊರೊನಾ ವೈರಸ್ ಸೋಂಕು ಹಬ್ಬಿದ್ದು ಇಲ್ಲಿನ ಪ್ರಧಾನಿ ಪೆಡ್ರೊ ಸಾನ್‌ಚೆಝ್ ಅವರ ಪತ್ನಿ ಬೆಗೊನಾ ಗೊಮೇಜ್ ಅವರಿಗೂ ಕೋವಿಡ್-19 ಇರುವುದಾಗಿ ತಿಳಿದುಬಂದಿದೆ.

ಮುನ್ನೆಚ್ಚರಿಕೆ ಕ್ರಮವಾಗಿ ಜನರು ಮನೆಯೊಳಗೇ ಇರುವಂತೆ ಸೂಚಿಸಿದ್ದು, ನೌಕರಿಗೆ ಹೋಗುವವರು, ಆಹಾರ ಅಥವಾ ಔಷಧಿ ಖರೀದಿಗೆ ಮಾತ್ರ ಜನರು ಹೊರಗೆ ಹೋದರೆ ಸಾಕು ಎಂದು ಸ್ಪೇನ್ ಸರ್ಕಾರ ಹೇಳಿದೆ.
ಶನಿವಾರ ಸ್ಪೇನ್ ದೇಶದಾದ್ಯಂದ 15 ದಿನಗಳ ತುರ್ತುಪರಿಸ್ಥಿತಿ ಘೋಷಿಸಲಾಗಿದೆ.

ಶುಕ್ರವಾರ ಸಂಜೆವರೆಗೆ ಸ್ಪೇನ್‌ನಲ್ಲಿ ಹೊಸದಾಗಿ 1,500 ಕೊರೊನಾ ಸೋಂಕು ಪ್ರಕರಣಗಳು ವರದಿಯಾಗಿವೆ. ಈ ಮೂಲಕ ಒಟ್ಟು ಪ್ರಕರಣಗಳ ಸಂಖ್ಯೆ 5,753ಕ್ಕೇರಿದ್ದು ಯುರೋಪ್ ರಾಷ್ಟ್ರಗಳಲ್ಲಿ ಇಟಲಿ ಬಳಿಕ ಅತೀ ಹೆಚ್ಚು ಪ್ರಕರಣ ಪತ್ತೆಯಾಗಿರುವ ರಾಷ್ಟ್ರವಾಗಿದೆ ಇದು. ಇಲ್ಲಿಯವರೆಗೆ 183 ಮಂದಿ ಸಾವಿಗೀಡಾಗಿದ್ದಾರೆ.

ಗುಂಪು ಸೇರುವುದು, ರಸ್ತೆಯಲ್ಲಿ ಓಡಾಡುವುದನ್ನು ನಿರ್ಬಂಧಿಸಲಾಗಿದ್ದು ಪೊಲೀಸರು ಜನರ ಮೇಲೆ ನಿಗಾವಹಿಸಲಿದ್ದಾರೆಎಂದು ಹೇಳಿದ ಪೆಡ್ರೊ ಸಾನ್‌ಚೆಝ್, ಪತ್ನಿ ಗೊಮೇಜ್‌ಗೂ ಸೋಂಕು ತಗಲಿರುವುದಾಗಿ ಹೇಳಿದ್ದರು.

ಮುಂಜಾಗ್ರತಾ ಕ್ರಮಗಳನ್ನು ಶೀಘ್ರವೇ ಅಳವಡಿಸಿಕೊಳ್ಳಬೇಕು. ಇದರಿಂದ ಸಮಸ್ಯೆಗಳೂ ತಲೆದೋರಬಹುದು ಆದರೆ ವೈರಸ್ ವಿರುದ್ಧ ನಾವು ಹೋರಾಡಲೇಬೇಕಿದೆ. ಈ ಯುದ್ಧವನ್ನು ನಾವು ಗೆಲ್ಲುತ್ತೇವೆ. ಆದರೆ ಇದಕ್ಕಾಗಿ ನಾವು ತೆರಬೇಕಾಗಿರುವ ಕನಿಷ್ಠ ಬೆಲೆಯೂ ಮುಖ್ಯವಾಗಿದೆ ಎಂದು ಎಂದು ಸಾನ್‌ಚೇಝ್ ಹೇಳಿದ್ದಾರೆ.

ಔಷಧಿ ಮಳಿಗೆ, ಸೂಪರ್ ಮಾರ್ಕೆಟ್ ಹೊರತು ಪಡಿಸಿ ದೇಶದಾದ್ಯಂತವಿರುವ ಎಲ್ಲ ವಹಿವಾಟುಗಳು ಮುಚ್ಚಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.