ADVERTISEMENT

ಐದು ದಶಕದಲ್ಲಿ ವಿಶ್ವದಾದ್ಯಂತ ವನ್ಯಜೀವಿಗಳ ಸಂಖ್ಯೆ ಶೇ 69 ಕುಸಿತ! ಓದಬೇಕಾದ ಸಂಗತಿ

ಏಜೆನ್ಸೀಸ್
Published 13 ಅಕ್ಟೋಬರ್ 2022, 16:16 IST
Last Updated 13 ಅಕ್ಟೋಬರ್ 2022, 16:16 IST
ಹುಲಿ
ಹುಲಿ   

ಪ್ಯಾರಿಸ್‌ (ಎಎಫ್‌ಪಿ):ಕಳೆದ 50 ವರ್ಷಗಳಲ್ಲಿ ವಿಶ್ವದಾದ್ಯಂತ ವನ್ಯಜೀವಿಗಳ ಸಂಖ್ಯೆಯಲ್ಲಿ ಶೇ 69ರಷ್ಟು ಕುಸಿತವಾಗಿದ್ದು, ಮಾನವನ ವಿಪರೀತ ಚಟುವಟಿಕೆಯಿಂದಪ್ರಕೃತಿಗೆ ಆಗಿರುವ ವಿನಾಶಕಾರಿ ನಷ್ಟವನ್ನು ಗುರುವಾರ ಬಿಡುಗಡೆಯಾದ ಡಬ್ಲ್ಯುಡಬ್ಲ್ಯುಎಫ್‌ ವರದಿ ಎತ್ತಿತೋರಿಸಿದೆ.

32,000 ಜಾತೀಯ ಸಸ್ತನಿಗಳು, ಪಕ್ಷಿಗಳು, ಉಭಯಚರಗಳು, ಸರೀಸೃಪಗಳು ಮತ್ತು ಮೀನುಗಳ ಪೈಕಿ 5,000ಕ್ಕೂ ಹೆಚ್ಚು ಕ್ಷೀಣಿಸಿವೆ.ಜಗತ್ತಿನಾದ್ಯಂತ ವನ್ಯಜೀವಿಗಳ ಸಂಖ್ಯೆ ಕ್ಷೀಣಿಸುತ್ತಿರುವ ವೇಗವನ್ನುಡಬ್ಲ್ಯುಡಬ್ಲ್ಯುಎಫ್ ಲಿವಿಂಗ್ ಪ್ಲಾನೆಟ್ ಸೂಚ್ಯಂಕವು ತೋರಿಸಿದೆ.ಲ್ಯಾಟಿನ್ ಅಮೆರಿಕ ಮತ್ತು ಕೆರಿಬಿಯನ್‌ನಂತಹ ಜೀವವೈವಿಧ್ಯದಿಂದ ಕೂಡಿದ ಸಮೃದ್ಧ ಪ್ರದೇಶಗಳಲ್ಲಿ, ಪ್ರಾಣಿಗಳ ಸಂಖ್ಯೆಯ ನಷ್ಟದ ಅಂಕಿ ಅಂಶವು ಶೇ 94ರಷ್ಟಿದೆ.

ವಿಶೇಷವಾಗಿ ವಿಶ್ವದ ಕೆಲವು ಜೀವವೈವಿಧ್ಯದ ಭೂದೃಶ್ಯಗಳ ನೆಲೆಯಾದಉಷ್ಣವಲಯದ ಪ್ರದೇಶಗಳಲ್ಲಿವನ್ಯಜೀವಿ ಸಂಖ್ಯೆಯಲ್ಲಿ ವಿನಾಶಕಾರಿ ಕುಸಿತ ಆಗಿರುವುದನ್ನು ಈ ದತ್ತಾಂಶತೋರಿಸುತ್ತದೆ. ಇದುಅತ್ಯಂತ ಚಿಂತೆಗೀಡು ಮಾಡಿರುವ ದತ್ತಾಂಶ ಎಂದುಡಬ್ಲ್ಯುಡಬ್ಲ್ಯುಎಫ್ ಇಂಟರ್ ನ್ಯಾಷನಲ್‌ನ ಮಹಾನಿರ್ದೇಶಕ ಮಾರ್ಕೊ ಲ್ಯಾಂಬರ್ಟಿನಿ ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.