ಲಿಸ್ಬನ್: ‘ಹತಾಶ ಪ್ರಚೋದನೆಗೆ ಬೆದರುವುದಿಲ್ಲ’ ಎಂದು ಪೋರ್ಚುಗಲ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಹೇಳಿದೆ.
ಪಾಕಿಸ್ತಾನದ ಗುಂಪೊಂದು ತನ್ನ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದ ಬಳಿಕ ಈ ಹೇಳಿಕೆ ನೀಡಿದ್ದು, ‘ನಮ್ಮ ನಿರ್ಧಾರ ಅಚಲವಾಗಿದೆ’ ಎಂದಿದೆ.
‘ಹೇಡಿತನದ ಕೃತ್ಯಕ್ಕೆ ಆಪರೇಷನ್ ಸಿಂಧೂರ ಮೂಲಕ ತಕ್ಕ ಉತ್ತರ ನೀಡಲಾಗಿದೆ’ ಎಂದೂ ‘ಎಕ್ಸ್’ನಲ್ಲಿ ಉಲ್ಲೇಖಿಸಿದೆ.
‘ಆಪರೇಷನ್ ಸಿಂಧೂರ ಮುಗಿದಿಲ್ಲ ಎಂಬ ಸಂದೇಶವನ್ನು ಪ್ರತಿಭಟನಕಾರರಿಗೆ ನೀಡಲಾಯಿತು’ ಎಂದು ಪೋರ್ಚುಗಲ್‌ನ ಭಾರತದ ರಾಯಭಾರಿ ಪುನೀತ್ ಕುಂಡಲ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.