ADVERTISEMENT

ಭಾರತದೊಂದಿಗಿನ ಬಾಂಧವ್ಯ ಉನ್ನತ ಮಟ್ಟಕ್ಕೆ: ಟ್ರಂಪ್‌ ಭರವಸೆ

ಪಿಟಿಐ
Published 27 ಅಕ್ಟೋಬರ್ 2022, 12:38 IST
Last Updated 27 ಅಕ್ಟೋಬರ್ 2022, 12:38 IST
ಡೊನಾಲ್ಡ್‌ ಟ್ರಂಪ್‌
ಡೊನಾಲ್ಡ್‌ ಟ್ರಂಪ್‌   

ವಾಷಿಂಗ್ಟನ್‌: 2024ರ ಅಧ್ಯಕ್ಷೀಯ ಚುನಾವಣೆಯಲ್ಲಿ ತಾವು ಗೆದ್ದರೆ ಭಾರತದೊಂದಿಗಿನ ಬಾಂಧವ್ಯವನ್ನು ಮತ್ತೂ ಎತ್ತರಕ್ಕೆ ಒಯ್ಯುವುದಾಗಿಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ.

ಫ್ಲಾರಿಡಾದಲ್ಲಿರುವ ತಮ್ಮ ಮಾರ್‌–ಎ–ಲಾಗೊ ರೆಸಾರ್ಟ್‌ನಲ್ಲಿರಿಪಬ್ಲಿಕನ್‌ ಹಿಂದೂ ಒಕ್ಕೂಟವು (ಆರ್‌ಎಚ್‌ಸಿ) ದೀಪಾವಳಿ ಹಬ್ಬದ ಅಂಗವಾಗಿ ಆಯೋಜಿಸಿದ್ದ ಭಾಷಣದಲ್ಲಿ ಮಾತನಾಡಿದ ಟ್ರಂಪ್‌ ಅವರು, ‘2024ರ ಚುನಾವಣೆಯಲ್ಲಿ ನಾನು ಮತ್ತೆ ಅಧ್ಯಕ್ಷನಾಗಿ ಆಯ್ಕೆಯಾದರೆ, ಆರ್‌ಎಚ್‌ಸಿ ಸಂಸ್ಥಾಪಕ ಶಲಭ್‌ ಕುಮಾರ್‌ ಅವರನ್ನು ಭಾರತದ ರಾಯಭಾರಿಯ ಸ್ಥಾನಕ್ಕೆ ನಾಮನಿರ್ದೇಶನ ಮಾಡುವೆ’ ಎಂದರು.

ಟ್ರಂಪ್‌ ಅವರು ಕಳೆದ ಶುಕ್ರವಾರ ದೀಪಾವಳಿ ಹಬ್ಬದ ಕುರಿತು ಮಾಡಿದ ಭಾಷಣದ ವಿಡಿಯೊವನ್ನು ಆರ್‌ಎಚ್‌ಸಿ ಮಂಗಳವಾರ ಬಿಡುಗಡೆ ಮಾಡಿದೆ.

ADVERTISEMENT

ಹಿಂದೂಗಳು, ಭಾರತ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ತಮ್ಮ ಬಾಂಧವ್ಯದ ಕುರಿತು ರೆಸಾರ್ಟ್‌ನಲ್ಲಿ ನೆರೆದಿದ್ದ ಸುಮಾರು 200 ಭಾರತೀಯರು ಹಾಗೂ ಅಮೆರಿಕನ್ನರೊಡನೆ ಟ್ರಂಪ್‌ ಅವರು ತಮ್ಮ ಅನುಭವ ಹಂಚಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.