ADVERTISEMENT

Covid-19 World Update: ಜಗತ್ತಿನಾದ್ಯಂತ 77.85 ಲಕ್ಷ ಸಕ್ರಿಯ ಪ್ರಕರಣಗಳು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 2 ಅಕ್ಟೋಬರ್ 2020, 2:07 IST
Last Updated 2 ಅಕ್ಟೋಬರ್ 2020, 2:07 IST
ಕೊಲಂಬಿಯಾದಲ್ಲಿನ ಸಮುದ್ರ ತೀರವೊಂದರಲ್ಲಿ ಐಸ್‌ಕ್ರೀಂ ಮಾರಾಟ ಮಾಡುತ್ತಿರುವುದು
ಕೊಲಂಬಿಯಾದಲ್ಲಿನ ಸಮುದ್ರ ತೀರವೊಂದರಲ್ಲಿ ಐಸ್‌ಕ್ರೀಂ ಮಾರಾಟ ಮಾಡುತ್ತಿರುವುದು   
""

ಬೆಂಗಳೂರು: ಜಗತ್ತಿನಾದ್ಯಂತ 3.44 ಕೋಟಿಗೂ ಅಧಿಕ ಜನರು ಕೋವಿಡ್-19 ಸೋಂಕಿಗೆ ಒಳಗಾಗಿದ್ದರೆ, 10.27 ಲಕ್ಷಕ್ಕೂ ಹೆಚ್ಚು ಜನರು ಮೃತಪಟ್ಟಿರುವುದು ವರ್ಡೊ ಮೀಟರ್‌ ವೆಬ್‌ಸೈಟ್‌ನಿಂದ ತಿಳಿದು ಬಂದಿದೆ.

ಈವರೆಗೂ 2.56 ಕೋಟಿಗೂ ಹೆಚ್ಚು ಸೋಂಕಿತರು ಗುಣಮುಖರಾಗಿದ್ದಾರೆ. ಒಟ್ಟು 77,85,810 ಕೋವಿಡ್‌ ಪ್ರಕರಣಗಳು ಸಕ್ರಿಯವಾಗಿವೆ.

ಸೋಂಕು ಪ್ರಕರಣಗಳ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿರುವ ಅಮೆರಿಕದಲ್ಲಿ ಕೋವಿಡ್-19 ದೃಢಪಟ್ಟ ಒಟ್ಟು ಪ್ರಕರಣಗಳ ಸಂಖ್ಯೆ 75 ಲಕ್ಷ ಸಮೀಪಿಸಿದೆ. ಈವರೆಗೂ 2,12,660 ಮಂದಿ ಮೃತಪಟ್ಟಿದ್ದರೆ, 47,36,612 ಜನರು ಚೇತರಿಸಿಕೊಂಡಿದ್ದಾರೆ.

ADVERTISEMENT

ಭಾರತದಲ್ಲಿ ಈವರೆಗೂ ಸೋಂಕಿನಿಂದ 99,804 ಮಂದಿ ಸಾವಿಗೀಡಾಗಿದ್ದರೆ, ಬ್ರೆಜಿಲ್‌ನಲ್ಲಿ 1,44,767 ಮಂದಿ, ಮೆಕ್ಸಿಕೊದಲ್ಲಿ 77,646 ಜನರು ಮೃತಪಟ್ಟಿದ್ದಾರೆ.

ಹೆಚ್ಚು ಸಕ್ರಿಯ ಪ್ರಕರಣಗಳಿರುವ ರಾಷ್ಟ್ರಗಳು:

* ಅಮೆರಿಕ: 25,45,343
* ಭಾರತ: 9,43,503
* ಬ್ರೆಜಿಲ್‌: 4,91,690
* ಫ್ರಾನ್ಸ್‌: 4,48,689
* ರಷ್ಯಾ: 2,00,098
* ಅರ್ಜೆಂಟಿನಾ: 1,41,474
* ಮೆಕ್ಸಿಕೊ: 1,31,684
* ಉಕ್ರೇನ್‌: 1,14,392
* ಪೆರು: 98,551

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.