ADVERTISEMENT

ಉಕ್ರೇನ್‌ನಲ್ಲಿ ಹುಸಿ-ಗಣರಾಜ್ಯ ಸ್ಥಾಪಿಸಲು ರಷ್ಯಾ ಪ್ರಯತ್ನ: ಝೆಲೆನ್‌ಸ್ಕಿ

ಪಿಟಿಐ
Published 13 ಮಾರ್ಚ್ 2022, 6:13 IST
Last Updated 13 ಮಾರ್ಚ್ 2022, 6:13 IST
ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ
ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ   

ಲಿವಿವ್‌: ಉಕ್ರೇನ್‌ನಲ್ಲಿ ರಷ್ಯಾ ಹೊಸ ಹುಸಿ-ಗಣರಾಜ್ಯವನ್ನು ಸ್ಥಾಪಿಸುವ ಪ್ರಯತ್ನ ನಡೆಸುತ್ತಿದೆ. ಈ ಮೂಲಕ ಉಕ್ರೇನ್‌ ರಾಷ್ಟ್ರವನ್ನು ಒಡೆಯಲು ಹುನ್ನಾರ ನಡೆಸಿದೆ ಎಂದು ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಆರೋಪಿಸಿದ್ದಾರೆ.

ಶನಿವಾರ ರಾತ್ರಿ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ ಝೆಲೆನ್‌ಸ್ಕಿ, ಆಕ್ರಮಣಕಾರರು ಖೆರ್ಸನ್‌ ಪ್ರದೇಶದಲ್ಲಿ ಹುಸಿ-ಗಣರಾಜ್ಯ ನಿರ್ಮಿಸುವ ಪ್ರಯತ್ನಗಳನ್ನು ನಡೆಸುತ್ತಿದ್ದಾರೆ. ಸ್ಥಳೀಯ ರಾಜಕೀಯ ನಾಯಕರಿಗೆ ಬ್ಲಾಕ್‌ಮೇಲ್‌ ಮಾಡುತ್ತಿದ್ದಾರೆ. ಲಂಚಕ್ಕೆ ಹಾತೊರೆಯುವ ಅಧಿಕಾರಿಗಳಿಗಾಗಿ ನಿರೀಕ್ಷಿಸುತ್ತಿದ್ದಾರೆ ಎಂದು ಝೆಲೆನ್‌ಸ್ಕಿ ಎಚ್ಚರಿಕೆ ನೀಡಿದರು.

ಉಕ್ರೇನ್‌ ಈ ಪರೀಕ್ಷೆಯನ್ನು ಸಮರ್ಥವಾಗಿ ಎದುರಿಸುತ್ತದೆ. ನಮಗೆ ಸಮಯಾವಕಾಶ ಬೇಕು. ನಮ್ಮ ನೆಲಕ್ಕೆ ಬಂದಿರುವ ಯುದ್ಧಗಾಹಿಗಳನ್ನು ಹಿಮ್ಮೆಟ್ಟಿಸಬೇಕು ಎಂದು ಝೆಲೆನ್‌ಸ್ಕಿ ಕರೆ ನೀಡಿದರು.

ADVERTISEMENT

ಉಕ್ರೇನ್‌ ಮೇಲೆ ಆಕ್ರಮಣ ನಡೆಸುವುದಕ್ಕೂ ಮೊದಲು ಫೆಬ್ರವರಿಯಲ್ಲಿ ದೊನೆತ್‌ಸ್ಕ್‌ ಪೀಪಲ್ಸ್‌ ರಿಪಬ್ಲಿಕ್‌ ಮತ್ತು ಲುಹಾನ್‌ಸ್ಕ್‌ ಪೀಪಲ್ಸ್‌ ರಿಪಬ್ಲಿಕ್‌ಗೆ ರಷ್ಯಾ ಮಾನ್ಯತೆ ನೀಡಿದೆ. ಉಕ್ರೇನ್‌ ಪ್ರತ್ಯೇಕವಾದಿಗಳ ಪ್ರದೇಶವನ್ನು ರಕ್ಷಿಸುವುದು ತಮ್ಮ ಕರ್ತವ್ಯ ಎಂದು ರಷ್ಯಾ ಹೇಳಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.