ADVERTISEMENT

ನ್ಯೂಯಾರ್ಕ್ ಮೇಯರ್ ಚುನಾವಣೆ: ಅಂತಿಮ ಸ್ಪರ್ಧೆಗೆ ಜೊಹ್ರಾನ್ ಮಮ್ದಾನಿ

​ಪ್ರಜಾವಾಣಿ ವಾರ್ತೆ
Published 1 ಜುಲೈ 2025, 16:46 IST
Last Updated 1 ಜುಲೈ 2025, 16:46 IST
ನ್ಯೂಯಾರ್ಕ್‌ನ ಅಟಾರ್ನಿ ಜನರಲ್ ಲೆಟಿಷಿಯಾ ಜೇಮ್ಸ್‌ ಜತೆ ಜೊಹ್ರಾನ್ ಮಮ್ದಾನಿ –ಎಎಫ್‌ಪಿ ಚಿತ್ರ
ನ್ಯೂಯಾರ್ಕ್‌ನ ಅಟಾರ್ನಿ ಜನರಲ್ ಲೆಟಿಷಿಯಾ ಜೇಮ್ಸ್‌ ಜತೆ ಜೊಹ್ರಾನ್ ಮಮ್ದಾನಿ –ಎಎಫ್‌ಪಿ ಚಿತ್ರ   

ನ್ಯೂಯಾರ್ಕ್: ಡೆಮಾಕ್ರಟಿಕ್ ಪಕ್ಷದಿಂದ ನ್ಯೂಯಾರ್ಕ್ ಮೇಯರ್ ಸ್ಥಾನಕ್ಕೆ ಪ್ರತಿನಿಧಿಸಲು ನಡೆದ ಪ್ರಾಥಮಿಕ ಚುನಾವಣೆಯಲ್ಲಿ ಇಂಡೋ–ಅಮೆರಿಕನ್ ಅಭ್ಯರ್ಥಿ ಜೊಹ್ರಾನ್ ಮಮ್ದಾನಿ ಅವರು ಮಾಜಿ ಗವರ್ನರ್ ಆ್ಯಂಡ್ರ್ಯೂ ಕೌಮೋ ಅವರನ್ನು ಮಣಿಸಿರುವುದು ಅಧಿಕೃತ ಫಲಿತಾಂಶದಿಂದ ಸ್ಪಷ್ಟವಾಗಿದೆ. 

ಕ್ವೀನ್ಸ್‌ನ ಡೆಮಾಕ್ರಟಿಕ್ ಸೋಷಿಯಲಿಸ್ಟ್ ಮತ್ತು ಸ್ಟೇಟ್‌ ಅಸೆಂಬ್ಲಿ ಸದಸ್ಯರಾಗಿರುವ ಜೊಹ್ರಾನ್ ಅವರು ಭಾರತದ ಸಿನಿಮಾ ನಿರ್ಮಾಪಕಿ ಮೀರಾ ನಾಯರ್ ಅವರ ಪುತ್ರ. ಮೇಯರ್‌ ಅಂತಿಮ ಆಯ್ಕೆಗೆ ನಡೆಯುವ ಸಾರ್ವತ್ರಿಕ ಚುನಾವಣೆಯಲ್ಲಿ ಜೊಹ್ರಾನ್, ಮಾಜಿ ಮೇಯರ್- ರಿಪಬ್ಲಿಕನ್ ಪಕ್ಷದ ಎರಿಕ್ ಆ್ಯಡಮ್ಸ್ ಅವರನ್ನು ಎದುರಿಸಬೇಕಿದೆ.

ಟ್ರಂಪ್ ಟೀಕೆ: ಡೆಮಾಕ್ರಟಿಕ್ ಪಕ್ಷದಿಂದ ಮೇಯರ್ ಸ್ಥಾನದ ಚುನಾವಣೆಗೆ ಸ್ಪರ್ಧಿಸಲು ಜೊಹ್ರಾನ್ ಮಮ್ದಾನಿ ಅವರನ್ನು ಆಯ್ಕೆ ಮಾಡಿರುವ ಜನರು ಮರುಳರು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರತಿಕ್ರಿಯಿಸಿದ್ದಾರೆ. ಜೊಹ್ರಾನ್ ಒಬ್ಬ ಕಮ್ಯುನಿಸ್ಟ್. ಅಂಥವರ ಆಯ್ಕೆ ಯಾವತ್ತೂ ಕಟ್ಟ ಕಡೆಯದ್ದಾಗರಬೇಕು ಎಂದಿದ್ದಾರೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.