ADVERTISEMENT

ಮತ್ತೊಂದು ದಾಖಲೆಗೆ ಸೌದಿ ತಯಾರು

ಪೃಥ್ವಿರಾಜ್ ಎಂ ಎಚ್
Published 12 ಅಕ್ಟೋಬರ್ 2017, 19:30 IST
Last Updated 12 ಅಕ್ಟೋಬರ್ 2017, 19:30 IST
ಮತ್ತೊಂದು ದಾಖಲೆಗೆ ಸೌದಿ ತಯಾರು
ಮತ್ತೊಂದು ದಾಖಲೆಗೆ ಸೌದಿ ತಯಾರು   

ಪ್ರಸ್ತುತ ವಿಶ್ವದ ಅತಿ ಎತ್ತರದ ಕಟ್ಟಡವಾದ ಬುರ್ಜ್‌ ಖಲೀಫಾ ನಿರ್ಮಿಸಿ ಸೌದಿ ಅರೇಬಿಯಾ ದಾಖಲೆ ಬರೆದಿದೆ. ಈಗ ತನ್ನ ದಾಖಲೆಯನ್ನು ತಾನೇ ಮುರಿಯುತ್ತಿದ್ದು ವಿಶ್ವದ ಅತಿ ಎತ್ತರದ ಕಟ್ಟಡ ‘ಜೆಡ್ಡಾ ಟವರ್‌’ ಅನ್ನು ನಿರ್ಮಿಸುತ್ತಿದೆ. ಇದು 2019ರ ಅಂತ್ಯಕ್ಕೆ ಬಳಕೆಗೆ ಮುಕ್ತವಾಗುವ ನಿರೀಕ್ಷೆ ಇದೆ.

ಜೆಡ್ಡಾ ಎಕನಾಮಿಕ್‌ ಕಂಪೆನಿ ಈ ಕಟ್ಟಡವನ್ನು ನಿರ್ಮಿಸುತ್ತಿದೆ. ಪ್ರಮುಖ ಕಟ್ಟಡ ನಿರ್ಮಾಣ ಸಂಸ್ಥೆ ಸೌದಿ ಬಿನ್‌ಲಾಡಿಯನ್‌ಗೆ ಇದನ್ನು ನಿರ್ಮಿಸುವ ಜವಾಬ್ದಾರಿ ವಹಿಸಲಾಗಿದೆ. ನಿರ್ಮಾಣ ಕಾರ್ಯ 2014ರಲ್ಲಿ ಆರಂಭವಾಗಿತ್ತು.

ವಿಶೇಷ
*1.2 ಹೆಕ್ಟೇರ್‌ ವಿಸ್ತೀರ್ಣ, Y ಆಕಾರ
*₹7,800 ಕೋಟಿ ವೆಚ್ಚ
*ಒಟ್ಟು ವಿಸ್ತೀರ್ಣ 57 ಲಕ್ಷ ಚದರ ಅಡಿ
*ಐಷಾರಾಮಿ ಹೋಟೆಲ್‌ಗಳು, ಕಚೇರಿಗಳು, ಸಿನಿಮಾ ಮಂದಿರಗಳು, ಷಾಪಿಂಗ್‌ ಕಾಂಪ್ಲೆಕ್ಸ್‌ಗೆ ಜಾಗ
*ಬುರ್ಜ್‌ ಖಲೀಫಾ ಕಟ್ಟಡಕ್ಕಿಂತ 568 ಅಡಿ ಹೆಚ್ಚು ಎತ್ತರ
*ಸೌದಿ ಅರೇಬಿಯಾದ ಕೆಂಪು ಸಮುದ್ರದ ತೀರ ಪ್ರದೇಶದಲ್ಲಿ ಕಂಗೊಳಿಸುವ ವಾಸ್ತುಶಿಲ್ಪ ವೈಭವ
*2,139 ಅಡಿ ಎತ್ತರದಲ್ಲಿ 98 ಅಡಿ ವ್ಯಾಸದ ಸ್ಕೈ ಟೆರೇಸ್‌ (ವೀಕ್ಷಣಾಲಯ) ನಿರ್ಮಾಣ
*ನಿರ್ಮಾಣ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವ ಕಾರ್ಮಿಕರ ಸಂಖ್ಯೆ ಸುಮಾರು 70,000
*ಕಟ್ಟಡದ ಹೊರ ಭಾಗಕ್ಕೆ ಗಾಜು
*ಪರಿಸರ ಸ್ನೇಹಿಯಾಗಿ ಕಟ್ಟಡ
*ಕಟ್ಟಡದ ಬುನಾದಿಗಾಗಿ ಉಕ್ಕು ಬಳಕೆ

ADVERTISEMENT

*

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.