ADVERTISEMENT

‘ಮದ್ವೆಯಾದ್ರೆ ಎಲ್ಲದಕ್ಕೂ ಬ್ರೇಕ್‌ ಬೀಳುತ್ತೆ...!’

ಡಿ.ಬಿ, ನಾಗರಾಜ
Published 4 ಆಗಸ್ಟ್ 2018, 19:30 IST
Last Updated 4 ಆಗಸ್ಟ್ 2018, 19:30 IST

ವಿಜಯಪುರ: ‘ಸರಿಯಾದ ವಯಸ್ಸಿನಲ್ಲಿ ಮದುವೆಯಾಗದಿದ್ದರೆ ಪುರುಷರು ಅತ್ತಿತ್ತ ಕಣ್ಣು ಹಾಯಿಸುತ್ತಾರೆ. ಸಕಾಲದಲ್ಲಿ ಮದುವೆಯಾಗಿ, ಹೆಂಡ್ತಿ ಇದ್ರೆ ಇದಕ್ಕೆ ಬ್ರೇಕ್‌ ಬೀಳುತ್ತದೆ, ಜೀವನದಲ್ಲಿ ಒಂದು ಬಿಗಿಯೂ ಇರುತ್ತದೆ. ಪತ್ನಿಯ ಭಯ ಆಗಾಗ ಕಾಡುತ್ತದೆ...!’

ಸಿಪಿಐ ಮುಖಂಡ ಡಾ.ಸಿದ್ಧನಗೌಡ ಪಾಟೀಲರ ವಾದವಿದು.

ವಿಜಯಪುರದಲ್ಲಿ ಈಚೆಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಿದ್ಧನಗೌಡ ಅವರು, ‘ಕಾವಿಯೊಳಗಿನ ಕಾಮುಕಿಗಳಿಗೆ ಮೊದಲು ಮದುವೆ ಮಾಡಬೇಕು. ಇಲ್ಲದಿದ್ದರೇ ಮಠ ಪ್ರವೇಶಿಸುವ ಮಹಿಳಾ ಭಕ್ತರ ಮೇಲೆ ನಡೆಯುವ ಲೈಂಗಿಕ ಶೋಷಣೆ ತಪ್ಪದು’ ಎಂದರು.

ADVERTISEMENT

‘ಮದುವೆಯಾದ್ರೇ ಅಪಾಯವಿಲ್ವೇ, ಬೇರೊಬ್ಬರ ಸಹವಾಸಕ್ಕೆ ಹೋಗೋದಿಲ್ವೇ’ ಎಂದು ಪತ್ರಕರ್ತರೊಬ್ಬರು ಪ್ರಶ್ನಿಸುತ್ತಿದ್ದಂತೆ, ‘ಮೊದಲು ಕಾವಿಯೊಳಗೆ ಅಡಗಿಕೊಂಡಿರುವ ಕಾಮುಕಿಗಳಿಗೆ ಲಗ್ನ ಮಾಡೋಣ. ಆಮೇಲೆ ನಿಮಗೆ ತಿಳಿಯುತ್ತದೆ. ಮದುವೆಯ ಮಹತ್ವ. ಹೆಂಡತಿಯ ಹಿಡಿತ...’ ಎಂದು ಹೇಳುತ್ತಿದ್ದಂತೆ, ಗೋಷ್ಠಿಯಲ್ಲಿ ಒಮ್ಮಿಂದೊಮ್ಮೆಗೆ ನಗೆ ಬುಗ್ಗೆ ಚಿಮ್ಮಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.