ಗಾಂಧಿ ಜಯಂತಿಯ ಈ ದಿನದಂದು ನಾವು ಮಹಾತ್ಮ ಗಾಂಧೀಜಿ ಅವರನ್ನು ನೆನೆಪಿಸಿಕೊಳ್ಳುತ್ತೇವೆ. ಸ್ವಚ್ಛ ಭಾರತ ಮಿಷನ್ (ಎಸ್ ಬಿಎಂ) ಆರಂಭವಾಗಿ ಹನ್ನೊಂದು ವರ್ಷಗಳು ಕಳೆದಿವೆ 'ಸ್ವಾತಂತ್ರ್ಯಕ್ಕಿಂತ ನೈರ್ಮಲ್ಯ ಮುಖ್ಯ' ಎಂಬುದು. ಇದು ಕೇವಲ ರೂಪಕವಲ್ಲ, ಅದು ಕ್ರಿಯೆ ಕೈಗೊಳ್ಳಲು ನೀಡಿದ ಸ್ಪಷ್ಟ ಕರೆಯಾಗಿತ್ತು. ಅದು ಘನತೆ, ಆರೋಗ್ಯ ಮತ್ತು ಶಿಸ್ತು ರಾಷ್ಟ್ರದ ಪ್ರಗತಿಗೆ ಭದ್ರ ಬುನಾದಿ ಎಂಬುದರ ಸಂಕೇತವಾಗಿತ್ತು.
ಸ್ವಚ್ಛ ಭಾರತ ಮಿಷನ್‌ನಡಿ ಭಾರತವು ನೈರ್ಮಲ್ಯವನ್ನು ಜನಾಂದೋಲನವನ್ನಾಗಿ ಮಾಡಿದೆ. ನಮ್ಮ ಗೌರವಾನ್ವಿತ ಪ್ರಧಾನಮಂತ್ರಿ ಅವರು ಭಾರತವನ್ನು ಬಯಲು ಬಹಿರ್ದೆಸೆ ಮುಕ್ತಗೊಳಿಸುವ ದೂರದೃಷ್ಟಿಯೊಂದಿಗೆ ಆರಂಭವಾಗಿದ್ದು, ಇದೀಗ ಸ್ವಚ್ಛತೆ, ನೈರ್ಮಲ್ಯ ಮತ್ತು ಸಮುದಾಯ ಮಾಲೀಕತ್ವದ ಸಂಸ್ಕೃತಿಯಾಗಿ ಬೆಳೆದದು, 'ಸ್ವಭಾವ ಸ್ವಚ್ಛತಾ, ಸಂಸ್ಕಾರ ಸ್ವಚ್ಛತಾ' ಎಂಬ ನಂಬಿಕೆಯನ್ನು ಪುನರುಚ್ಚರಿಸುತ್ತಿದೆ.
ಸ್ವಚ್ಛ ಭಾರತ ಮಿಷನ್‌ನ ಪರಿಣಾಮಗಳು ಎಲ್ಲರಿಗೂ ತಿಳಿದಿದೆ ಮತ್ತು ವಿವಿಧ ಖ್ಯಾತಿಯ ಸಂಸ್ಥೆಗಳು ಅದನ್ನು ಅಧ್ಯಯನ ಮಾಡಿವೆ ಮತ್ತು ಈ ಕಾರ್ಯಕ್ರಮದಡಿಯಲ್ಲಿ ಸೃಷ್ಟಿಸಲಾದ ಸ್ವತ್ತುಗಳು ತಮ್ಮದೇ ಆದ ಕಥೆಯನ್ನು ಹೇಳುತ್ತವೆ. ಎಸ್ ಬಿಎಂ-ಗ್ರಾಮೀಣ ಅಡಿಯಲ್ಲಿ, 11.5 ಕೋಟಿಗೂ ಅಧಿಕ ಶೌಚಾಲಯಗಳನ್ನು ನಿರ್ಮಿಸಲಾಗಿದೆ ಮತ್ತು ಇಂದು 4.7 ಲಕ್ಷಕ್ಕೂ ಅಧಿಕ ಹಳ್ಳಿಗಳು ತಮ್ಮನ್ನು ಬಯಲು ಬಹಿರ್ದೆಸೆ ಮುಕ್ತ(ಒಡಿಎಫ್) ಪ್ಲಸ್ ಮಾದರಿ ಎಂದು ಘೋಷಿಸಿಕೊಂಡಿವೆ, ಅಂದರೆ ಅವು ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣಾ ವ್ಯವಸ್ಥೆಗಳೊಂದಿಗೆ ಸಜ್ಜುಗೊಂಡಿವೆ ಮತ್ತು ವಾಸ್ತವವಾಗಿ ಸ್ವಚ್ಛವಾಗಿವೆ. ನಿಜವಾದ ಪರಿಣಾಮವು ಈ ಅಂಕಿಅಂಶಗಳಲ್ಲಿ ಮಾತ್ರವೇ ಆಗಿಲ್ಲ, ಬದಲಿಗೆ ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ಕುಟುಂಬಗಳ ಜೀವಂತ ಅನುಭವಗಳಲ್ಲಿದೆ. ಅದರಲ್ಲಿ ಮಹಿಳೆಯರು ನೀರನ್ನು ಪಡೆಯಲು ಹೆಚ್ಚು ದೂರ ನಡೆಯಬೇಕಾಗಿಲ್ಲ; ಮತ್ತು ಆರೋಗ್ಯಕರ ಮಕ್ಕಳು; ತ್ಯಾಜ್ಯ ನೀರು ಮತ್ತು ಪ್ಲಾಸ್ಟಿಕ್‌ಗಳನ್ನು ಉತ್ತಮವಾಗಿ ನಿರ್ವಹಿಸುವ ಶುದ್ಧ ಜಲಮೂಲಗಳು ಮತ್ತು ಪಂಚಾಯತ್‌ಗಳು ಮತ್ತು ಮಹಿಳಾ ಗುಂಪುಗಳು ತ್ಯಾಜ್ಯ ನಿರ್ವಹಣೆಯಲ್ಲಿ ಸ್ಥಳೀಯ ನಾಯಕತ್ವವನ್ನು ವಹಿಸಿಕೊಳ್ಳುವುದನ್ನು ನಾವು ಕಣ್ಣಾರೆ ಕಾಣುತ್ತಿದ್ದೇವೆ.
ಸ್ವಚ್ಛ ಭಾರತ್ ಮಿಷನ್-ಗ್ರಾಮೀಣ ಕಾರ್ಯಕ್ರಮವು ಮೂಲಸೌಕರ್ಯದಿಂದ ನಡವಳಿಕೆಯವರೆಗೆ, ನಿರ್ಮಾಣದಿಂದ ದೀರ್ಘಕಾಲೀನ ಸಂಸ್ಕೃತಿಯವರೆಗೆ ವಿಕಸನಗೊಂಡಿದೆ. ಬಯಲು ಬಹಿರ್ದೆಸೆ ಮುಕ್ತ (ಒಡಿಎಫ್) ನಿಂದ ಒಡಿಎಫ್ ಪ್ಲಸ್ ಮಾದರಿಯವರೆಗಿನ ಪಯಣವು ಚೌಕಟ್ಟುಗಳನ್ನು ಭರ್ತಿ ಮಾಡುವ ವಿಧಾನವಲ್ಲ, ಆದರೆ ಮನೆಗಳು, ಶಾಲೆಗಳು, ಅಂಗನವಾಡಿ ಕೇಂದ್ರಗಳು ಮತ್ತು ಸಾರ್ವಜನಿಕ ಸ್ಥಳಗಳು ಗ್ರಾಮೀಣ ನೀರು ಮತ್ತು ನೈರ್ಮಲ್ಯ ಕಾರ್ಯಾಚರಣೆಗಳ ಯಶಸ್ಸನ್ನು ಪ್ರತಿಬಿಂಬಿಸುತ್ತವೆ ಎಂದು ಖಚಿತಪಡಿಸಿಕೊಳ್ಳುವುದಾಗಿದೆ.
ಸ್ವಚ್ಛತೋತ್ಸವ: ಸಂಸ್ಕಾರವಾಗಿ ನೈರ್ಮಲ್ಯ
ಈ ವರ್ಷ 'ಸ್ವಚ್ಛೋತ್ಸವ' ಎಂಬ ಘೋಷವಾಕ್ಯದೊಂದಿಗೆ ನಡೆಯುವ ‘ಸ್ವಚ್ಛತೆಯೇ ಸೇವೆ’ (ಎಸ್ ಎಚ್ ಎಸ್, ವಾರ್ಷಿಕ 'ಸ್ವಚ್ಛತಾ ಹೀ ಸೇವಾ' ಅಭಿಯಾನವು ಹಬ್ಬಗಳು, ಜಾತ್ರೆಗಳು ಮತ್ತು ಕೂಟಗಳು ಕೇವಲ ಆಚರಣೆಗಳಲ್ಲ, ಅವು ಜವಾಬ್ದಾರಿಯನ್ನು ರೂಢಿಸಿಕೊಳ್ಳಲು ಮತ್ತು ಸ್ವಚ್ಛತೆಯಲ್ಲಿ ಸಂಸ್ಕಾರದ ಚಿಂತನೆಯನ್ನು ಪುನರುಚ್ಚರಿಸಲು ಅವಕಾಶಗಳಾಗಿವೆ ಎಂಬುದನ್ನು ನಮಗೆ ನೆನಪಿಸುತ್ತದೆ. ಈ ವರ್ಷ ಅಭಿಯಾನದ ಮೂಲಕ ಸಮುದಾಯಗಳು ಮತ್ತೊಮ್ಮೆ ಸ್ವಚ್ಛತೆಯನ್ನು ತಮ್ಮ ಸಂಸ್ಕೃತಿಯ ಭಾಗವಾಗಿ ಅಳವಡಿಸಿಕೊಳ್ಳುವುದನ್ನು ನೋಡುವುದು ಹರ್ಷದಾಯಕವಾಗಿದೆ, ಅದು ಕೇವಲ ಚಿಂತನೆಯಾಗಿ ಉಳಿದಿಲ್ಲ, ಪರಂಪರೆಯಾಗಿದೆ. ಸೂಕ್ತವಾದ ತ್ಯಾಜ್ಯ ವಿಂಗಡಣೆ ವ್ಯವಸ್ಥೆಗಳು ಮತ್ತು ಏಕ-ಬಳಕೆಯ ಪ್ಲಾಸ್ಟಿಕ್ ಬಳಕೆಯನ್ನು ತಗ್ಗಿಸುವ ಮೂಲಕ ಮತ್ತು ಎಸ್ ಎಚ್ ಎಸ್ ಕೋರ್ಸ್ ನೊಂದಿಗೆ ಪರಿಸರ ಸ್ನೇಹಿ ನೈರ್ಮಲ್ಯ ಸೌಲಭ್ಯಗಳನ್ನು ಅಳವಡಿಸಿಕೊಳ್ಳುವ ಮೂಲಕ ಹಬ್ಬಗಳನ್ನು ಜವಾಬ್ದಾರಿಯುತವಾಗಿ ಆಚರಿಸುವುದು ನಿಜವಾದ ಸ್ವಚ್ಛೋತ್ಸವವಾಗಿದೆ, ಅಲ್ಲಿ ನಾವು ಆಚರಿಸುವುದಲ್ಲದೆ, ನಾವು ಕೆಲವು ಅಭ್ಯಾಸಗಳನ್ನು ಸಾಂಸ್ಥಿಕಗೊಳಿಸುತ್ತಿದ್ದೇವೆ, ಈ ರೂಢಿಸಿಕೊಂಡಿರುವ ಅಭ್ಯಾಸವನ್ನಾಗಿ ಮಾಡುತ್ತಿದ್ದೇವೆ, ಅದು ಕಾಲಾನಂತರದಲ್ಲಿ ಪರಂಪರೆಯಾಗುತ್ತದೆ.
ನೈರ್ಮಲೀಕರಣ ಮತ್ತು ಭಾರತದ ಪ್ರಗತಿಗಾಥೆ
ಭಾರತವು ಜಾಗತಿಕ ಆರ್ಥಿಕತೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವುದರಿಂದ, ನೈರ್ಮಲ್ಯ ಮತ್ತು ಸ್ಚಚ್ಛತೆಯು ಕೇವಲ ಹೊರಗಿನ ದೃಶ್ಯಗಳಲ್ಲ, ಅವು ಕೇಂದ್ರ ಮೂಲಾಧಾರಗಳಾಗಿವೆ. ಪ್ರವಾಸಿಗರು ಮತ್ತು ಹೂಡಿಕೆದಾರರು ಭಾರತವನ್ನು ವಿಮಾನ ನಿಲ್ದಾಣಗಳು, ಮಾಲ್‌ಗಳು ಮತ್ತು ವ್ಯಾಪಾರ ಕೇಂದ್ರಗಳಿಂದ ಮಾತ್ರವಲ್ಲದೆ, ಅದರ ಪಟ್ಟಣಗಳು, ಘಾಟ್‌ಗಳು, ಹಳ್ಳಿಗಳು ಮತ್ತು ಸಾರ್ವಜನಿಕ ಸ್ಥಳಗಳ ಸ್ವಚ್ಛತೆಯಿಂದಲೂ ನಿರ್ಣಯಿಸುತ್ತಾರೆ.
ಸ್ವಚ್ಛವಾದ ದೇವಾಲಯದ ಆವರಣ, ಕಸ ಮುಕ್ತ ಕಡಲತೀರ ಅಥವಾ ಸುರಕ್ಷಿತ ನೈರ್ಮಲ್ಯ ಸೌಲಭ್ಯಗಳನ್ನು ಹೊಂದಿರುವ ಪರಂಪರೆಯ ತಾಣವು ಪ್ರವಾಸಿಗರು ಅಧಿಕ ಕಾಲ ಉಳಿಯಲು, ಹೆಚ್ಚು ಆನಂದಿಸಲು ಮತ್ತು ಹಿಂತಿರುಗಲು ಅನುವು ಮಾಡಿಕೊಡುತ್ತದೆ. ಹಾಗಾಗಿ ಸ್ವಚ್ಛತೆಯು ಹೆಮ್ಮೆ ಮಾತ್ರವಲ್ಲ, ಸ್ಥಳೀಯ ಸಮುದಾಯಗಳಿಗೆ ಆದಾಯ ಮತ್ತು ಜೀವನೋಪಾಯದ ವಿಧಾನವೂ ಆಗಿದೆ.
ಹೂಡಿಕೆದಾರರಿಗೆ ಶುದ್ಧ ನೀರು, ತ್ಯಾಜ್ಯ ನಿರ್ವಹಣಾ ವ್ಯವಸ್ಥೆಗಳು ಮತ್ತು ಕಾರ್ಮಿಕರಿಗೆ ಆರೋಗ್ಯಕರ ಜೀವನ ಪರಿಸ್ಥಿತಿಗಳ ಲಭ್ಯತೆಯು ಮೂಲಭೂತ ಅಪೇಕ್ಷಣೆಯಾಗಿದೆ. ನೈರ್ಮಲ್ಯವು ಸಾಮಾಜಿಕ ನೀತಿ ಮಾತ್ರವಲ್ಲ, ಇದು ಆರ್ಥಿಕ ಮೂಲಸೌಕರ್ಯವಾಗಿದೆ.
ಕಡಿಮೆ ಅನಾರೋಗ್ಯದ ದಿನಗಳು, ಆರೋಗ್ಯಕರ ಮಕ್ಕಳು ಮತ್ತು ತಗ್ಗಿದ ರೋಗ ಹೊರೆ ಕುಟುಂಬದ ಆದಾಯವನ್ನು ಉಳಿಸುತ್ತದೆ ಮತ್ತು ದುಡಿಯುವ ಶಕ್ತಿಯ ಉತ್ಪಾದಕತೆಯನ್ನು ಸುಧಾರಿಸುತ್ತದೆ. ಇದು ಪ್ರತಿಯಾಗಿ, ಭಾರತದ ಆರ್ಥಿಕ ಆವೇಗಕ್ಕೆ ನೇರವಾಗಿ ಆಹಾರವನ್ನು ನೀಡುತ್ತದೆ. ಸ್ವಚ್ಛವಾಗಿರುವ ರಾಷ್ಟ್ರವು ಹೂಡಿಕೆ ಮಾಡಬಹುದಾದ ಮತ್ತು ಜಗತ್ತಿಗೆ ಆಕರ್ಷಕವಾದ ರಾಷ್ಟ್ರವಾಗಿದೆ.
ಈ ಮಿಷನ್‌ನ ಹೃದಯಭಾಗದಲ್ಲಿ ಜನ ಭಾಗಿದಾರಿ ಇದೆ, ಏಕೆಂದರೆ ಎಸ್ ಬಿಎಂ ಸದಾ ಜನರಿಂದ ನಡೆಸಲ್ಪಡುವ ಚಳವಳಿಯಾಗಿದೆ. ಹಳ್ಳಿಗಳಲ್ಲಿ, ಗ್ರಾಮ ನೀರು ಮತ್ತು ನೈರ್ಮಲ್ಯ ಸಮಿತಿಗಳು (ವಿಡಬ್ಲೂಎಸ್ ಸಿ ಗಳು) ಮತ್ತು ಗ್ರಾಮ ಪಂಚಾಯತ್‌ಗಳು ಈ ಪ್ರಯತ್ನದ ಸಾಂಸ್ಥಿಕ ಆಧಾರಸ್ತಂಭಗಳಾಗಿ ಮುಂದುವರಿಯಬೇಕು, ಏಕೆಂದರೆ ಅವು ಗ್ರಾಮೀಣ ನೀರು ಮತ್ತು ಒಳಚರಂಡಿ ವ್ಯವಸ್ಥೆಯ ಸುತ್ತಲಿನ ನಿರ್ಧಾರಗಳಲ್ಲಿ ಪ್ರತಿ ಮನೆಯ ಧ್ವನಿಯನ್ನು ಪ್ರತಿನಿಧಿಸುತ್ತವೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಬೇಕು, ಅದು ಸೇವೆಗಳಿಗೆ ಸ್ಪಂದಿಸುವ, ಜವಾಬ್ದಾರಿಯುತ ಮತ್ತು ಸುಸ್ಥಿರವಾಗಿಸುವತ್ತ ಗಮನಹರಿಸುತ್ತದೆ.
ಎಸ್‌ಬಿಎಂನ ಮುಂದಿನ ಅಧ್ಯಾಯವು ಪಂಚಾಯತ್‌ಗಳು, ವಿಡಬ್ಲ್ಯೂಎಸ್‌ಸಿಗಳು, ಮಹಿಳಾ ಸಾಮೂಹಿಕ ಸಂಸ್ಥೆಗಳು ಮತ್ತು ಯುವ ಕ್ಲಬ್‌ಗಳೊಂದಿಗಿನ ಪಾಲುದಾರಿಕೆಯನ್ನು ಮತ್ತಷ್ಟು ವೃದ್ಧಿಸಲಿವೆ. ಎಸ್‌ಬಿಎಂ ಪಯಣವು ಶೌಚಾಲಯಗಳು ಅಥವಾ ಚರಂಡಿಗಳನ್ನು ಉಳಿಸಿಕೊಳ್ಳುವುದರ ಬಗ್ಗೆ ಮಾತ್ರವಲ್ಲ, ನೈರ್ಮಲ್ಯದ ಮೂಲಕ ಆರ್ಥಿಕ ಅವಕಾಶಗಳನ್ನು ಸಮರ್ಪಕವಾಗಿ ಬಳಕೆ ಮಾಡುವ ಬಗ್ಗೆಯೂ ಇದೆ. ಪರಂಪರೆ ಮತ್ತು ಆಧ್ಯಾತ್ಮಿಕ ತಾಣಗಳ ಬಳಿ ಇರುವ ಪಂಚಾಯತ್‌ಗಳು ಉತ್ತಮ ನೈರ್ಮಲ್ಯ ಸೌಲಭ್ಯಗಳನ್ನು ನಿರ್ವಹಿಸಲು ಬೆಂಬಲ ನೀಡಬೇಕು, ಭಾರತದ ಸಾಂಸ್ಕೃತಿಕ ಸಂಪತ್ತು ನಾಗರಿಕ ಹೆಮ್ಮೆಯೊಂದಿಗೆ ಹೊಂದಿಕೆಯಾಗುವಂತೆ ನೋಡಿಕೊಳ್ಳಬೇಕು.
ಉದ್ಯೋಗಗಳು, ಆದಾಯದ ಹರಿವುಗಳು ಮತ್ತು ಹಸಿರು ಉದ್ಯಮಗಳನ್ನು ಸೃಷ್ಟಿಸಲು ತ್ಯಾಜ್ಯದಿಂದ ಸಂಪತ್ತಿನ ಉಪಕ್ರಮಗಳನ್ನು ಉತ್ತೇಜಿಸಬೇಕು ಮತ್ತು ಮಾರಾಟ ಮಾಡಬೇಕು. ಶುದ್ಧ ಪರಿಸರ, ಸುರಕ್ಷಿತ ನೀರು ಮತ್ತು ವಿಶ್ವಾಸಾರ್ಹ ತ್ಯಾಜ್ಯ ನಿರ್ವಹಣೆಯೊಂದಿಗೆ, ಗ್ರಾಮೀಣ ಪ್ರದೇಶಗಳು ಕೃಷಿ ಸಂಸ್ಕರಣೆ, ಕರಕುಶಲ ವಸ್ತುಗಳು ಮತ್ತು ಸ್ಥಳೀಯ ಉದ್ಯಮಗಳಿಗೆ ಆಕರ್ಷಕ ತಾಣಗಳಾಗಿವೆ.
ದಕ್ಷತೆ ಮತ್ತು ಉದ್ಯೋಗ ಎರಡನ್ನೂ ಸೃಷ್ಟಿಸುವ ತಂತ್ರಜ್ಞಾನವನ್ನು ಸದುಪಯೋಗಪಡಿಸಿಕೊಳ್ಳುವುದು ಮತ್ತು ನಮ್ಮ ನೈರ್ಮಲ್ಯ ಕಾರ್ಮಿಕರು/ಸಫಾಯಿ ಮಿತ್ರರ ಘನತೆ ಮತ್ತು ಕಲ್ಯಾಣಕ್ಕೆ ಹೆಚ್ಚಿನ ಗಮನಹರಿಸುವುದು ಈ ಕಾರ್ಯಾಚರಣೆಯ ಕೇಂದ್ರ ಬಿಂದುವಾಗಿರಬೇಕು. ಯಾಂತ್ರೀಕೃತ ತ್ಯಾಜ್ಯ ನಿರ್ವಹಣೆಯನ್ನು ಉತ್ತೇಜಿಸಲು, ನೈರ್ಮಲ್ಯ ಕಾರ್ಮಿಕರ ಸಾಮಾಜಿಕ ಭದ್ರತಾ ಯೋಜನೆಗಳು ಮತ್ತು ವಿಮೆಗೆ ಲಭ್ಯತೆಯನ್ನು ಹೆಚ್ಚಿಸಲು ಮತ್ತು ಅವರ ಕುಟುಂಬಗಳಿಗೆ ಶಿಕ್ಷಣ ಬೆಂಬಲವನ್ನು ಒದಗಿಸುವ ಬಗ್ಗೆ ಹೆಚ್ಚಿನ ಅಭಿಯಾನಗಳನ್ನು ಜಾರಿಗೆ ತರಬೇಕು. ಸ್ವಚ್ಛ ಭಾರತವು ನಮ್ಮ ನೈರ್ಮಲ್ಯವನ್ನು ಸಂರಕ್ಷಿಸುವವರನ್ನು ರಕ್ಷಿಸುವ ನ್ಯಾಯಯುತ ಭಾರತವೂ ಆಗಿರಬೇಕು.
ನಾವು ಇಂದು ಮತ್ತೊಂದು ಗಾಂಧಿ ಜಯಂತಿಯನ್ನು ಆಚರಿಸುತ್ತಿರುವಾಗ ಮತ್ತು ಸ್ವಚ್ಛ ಭಾರತ ಮಿಷನ್‌ನ ಹನ್ನೊಂದು ವರ್ಷಗಳನ್ನು ಆಚರಿಸುತ್ತಿರುವಾಗ, ನೀರಿನ ಸುರಕ್ಷತೆಯೊಂದಿಗೆ ನೈರ್ಮಲ್ಯವನ್ನು ಸಂಯೋಜಿಸುವ ಮೂಲಕ ಎಲ್ಲಾ ಗ್ರಾಮಗಳನ್ನು ಸ್ವಚ್ಛ ಸುಜಲ ಗ್ರಾಮಗಳನ್ನಾಗಿ ಮಾಡುವ ಮತ್ತು ನೈರ್ಮಲ್ಯವನ್ನು ಘನತೆ ಮತ್ತು ಆರೋಗ್ಯಕ್ಕಿಂತ ಮೀರಿ ಮುನ್ನಡೆಸುವ ಮತ್ತು ಬೆಳವಣಿಗೆ ಮತ್ತು ಅವಕಾಶದ ಬಗ್ಗೆಯೂ ತಿಳಿಸಿಕೊಡುವ ಉದ್ದೇಶವನ್ನು ಹೊಂದಿದೆ.
ಸ್ವಚ್ಛತಾ ಎಂಬುದು ಜಗತ್ತಿಗೆ ಭಾರತದ ಮೊದಲ ಭಾವನೆಯಾಗಿದೆ. ಪ್ರವಾಸೋದ್ಯಮವನ್ನು ಬಲವರ್ಧನೆಗೊಳಿಸುವ ವ್ಯವಹಾರವನ್ನುಸಕ್ರಿಯಗೊಳಿಸುವ, ಕುಟುಂಬಗಳನ್ನು ರಕ್ಷಿಸುವಮತ್ತು ನಮ್ಮ ರಾಷ್ಟ್ರದಲ್ಲಿ ಹೆಮ್ಮೆಯನ್ನು ಬೆಳೆಸುವ ಶಕ್ತಿಯನ್ನು ಹೊಂದಿದೆ. ನಾವು ನೆನಪಿನಲ್ಲಿಟ್ಟುಕೊಳ್ಳಬೇಕು. ವಿಶ್ವಾಸಾರ್ಹ, ಜೀವಂತ ಫಲಿತಾಂಶಗಳನ್ನು ಕಣ್ಣೆದುರೇ ಹೊಂದಿರುವ ಈ ಮಿಷನ್ ಹನ್ನೊಂದು ವರ್ಷಗಳನ್ನು ಪೂರೈಸಿದೆ. ಬಾಪು ಅವರ ದೂರ ದೃಷ್ಟಿಯನ್ನು ನಾವು ಹೀಗೆಯೇ ಗೌರವಿಸುತ್ತೇವೆ. ಭವಿಷ್ಯದ ಭಾರತವನ್ನು ಹೀಗೆಯೇ ನಿರ್ಮಿಸುತ್ತೇವೆ.
ಲೇಖಕರು: ಜಲಶಕ್ತಿ ಸಚಿವಾಲಯದ ರಾಜ್ಯ ಸಚಿವರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.