ADVERTISEMENT

ಚುರುಮುರಿ: ಮಂಡ್ಯ ಯಾರು ಕಂಡ್ಯಾ?

ಚುರುಮುರಿ

ಗುರು ಪಿ.ಎಸ್‌
Published 20 ಫೆಬ್ರುವರಿ 2024, 19:28 IST
Last Updated 20 ಫೆಬ್ರುವರಿ 2024, 19:28 IST
<div class="paragraphs"><p>ಚುರುಮುರಿ&nbsp;</p></div>

ಚುರುಮುರಿ 

   

ಗುರು ಪಿ.ಎಸ್.‘ನಾ... ಬೆಂಕಿಯಂತೆ...’

‘ನಾ... ಗಾಳಿಯಂತೆ...’

ADVERTISEMENT

‘ಈ... ಜೋಡಿ ಮುಂದೆ,
ವೈರಿ ಉಳಿಯುವನೆ’

‘ಸೂರ್ಯ‌ ಬಾನಿಂದ ಓಡಿಬಂದಂತೆ 

ನೀನು ಬಂದಾಗ ನನಗಾಯ್ತು’

‘ಮಿಂಚು ಮೇಲಿಂದ ಜಾರಿ ಬಂದಂತೆ 

ನಿನ್ನ ಕಂಡಾಗ ನನಗಾಯ್ತು...’

ಮಿಂಚಿನಂತೆಯೇ ಡೆಲ್ಲಿಯಿಂದ

ಬೆಂಗಳೂರಿಗೆ ಬಂದಿಳಿದರು ‘ಬ್ರದರ್ಸ್’.

‘ಏನ್ರಣ್ಣ ಇದು, ಯಾವತ್ತೂ ಇಲ್ಲದ ಜೋಶ್ ಈಗ ಬಂದ್ಬಿಟ್ಟಿದೆ. ಅಣ್ಣಾವ್ರ ಹಾಡು ಬೇರೆ ಹೇಳ್ಕೊಂಡು ಬರ್ತಿದೀರ’ ಕೇಳ್ದ ವಿಜಿ.

‘ನಮ್ಮ ಪಕ್ಷಗಳು ಬೇರೆ ಬೇರೆ ಆಗಿರಬಹುದು. ಆದರೆ, ನಾವೀಗ ಬ್ರದರ್ಸ್ ಫ್ರಮ್ ಅನದರ್ ಮದರ್’ ನಕ್ಕರು ‘ದೋಸ್ತಿಗಳು’.

‘ಓಹ್, ಎಲೆಕ್ಷನ್ ತಯಾರಿ ಜೋರಾಗಿದೆ ಅನ್ಸುತ್ತೆ ಹಾಗಾದ್ರೆ’ ಎಂದು ವಿಜಿ ಹೇಳುತ್ತಿದ್ದಂತೆ, ‘ಈ... ಜೋಡಿ ಮುಂದೆ ವೈರಿ ಉಳಿಯುವನೆ...’ ಒಟ್ಟಿಗೇ ಮತ್ತೆ ಹಾಡಿದರು ಬ್ರದರ್ಸ್.

‘ಅದ್ಸರಿ, ಮಂಡ್ಯದಲ್ಲಿ ಯಾರ್ ಹೆಸರು ಫೈನಲ್ ಆಯ್ತು ಬ್ರದರ್ಸ್’ ನಿಂತ ನೆಲವೇ ಕುಸಿಯುವ ಪ್ರಶ್ನೆ ಕೇಳ್ದ ವಿಜಿ.

‘ಮತ್ತಿನ್ನ್ಯಾರು ನಮ್ಮ ಪಾರ್ಟಿ ಕ್ಯಾಂಡಿಡೇಟೇ ನಿಲ್ಲೋದು’ ದೃಢವಾಗಿ ಹೇಳಿದ ಬಿಗ್ ಬ್ರದರ್.

‘ಇಲ್ಲ ಇಲ್ಲ, ಮೊದಲಿಂದ್ಲೂ ಮಂಡ್ಯ ನಮ್ಮದೇ ಬೆಲ್ಟ್. ನಮ್ ಪಾರ್ಟಿಯವರೇ ನಿಲ್ತಾರೆ’ ಫಟ್ ಅಂತ ಹೇಳಿದ ಚಿಕ್ಕ ಬ್ರದರ್.‌

‘ಸುಮಕ್ಕ ನಿಲ್ಲೋದೇ ಕನ್ಫರ್ಮ್ ಅಂತ ಸುದ್ದಿ’ ಬೆಂಕಿ ಹಚ್ಚಿದ ವಿಜಿ.

‘ಕಮಲ ಅಂದ್ರೆ ಹೂವು, ಸುಮ ಅಂದ್ರೂ ಹೂವೇ ಅಂತ ಗೊತ್ತಿಲ್ವ ನಿಂಗೆ, ಅದೆಲ್ಲ ಆಗಲ್ಲ ಸುಮ್ನಿರಪ್ಪ ನೀನು’ ಚಿಕ್ಕ ಬ್ರದರ್‌ಗೆ ಸಿಟ್ಟು ಬಂತು.

ಕೆ.ಎಸ್.ನರಸಿಂಹಸ್ವಾಮಿಯವರ ಕ್ಷಮೆ ಕೋರುತ್ತಾ, ಅವರ ಹಾಡನ್ನು ಸ್ವಲ್ಪ ಬದಲಿಸಿ ಹೇಳುತ್ತಾ ಹೋದ ವಿಜಿ, ‘ಬೆಂಕಿಯು ನಿನ್ನದೇ, ಗಾಳಿಯು ನಿನ್ನದೇ... ಆರದಿರಲಿ ಬೆಳಕೂ...’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.