ADVERTISEMENT

ಚುರುಮುರಿ: ಹೊಸ ಹೊಸ ಸ್ಪರ್ಧೆ!

ಬಿ.ಎನ್.ಮಲ್ಲೇಶ್
Published 28 ಜುಲೈ 2022, 17:38 IST
Last Updated 28 ಜುಲೈ 2022, 17:38 IST
Churumuri==29072022
Churumuri==29072022   

‘ರೀ... ಕಾಮನ್‌ವೆಲ್ತ್ ಕ್ರೀಡಾಕೂಟ ಶುರುವಾಗೇತಲ್ಲ, ನಮ್ಮೋರು ಪದಕ ಗೆಲ್ತಾರೆ ಅಂತೀರಾ?’

‘ಗೆದ್ದೇ ಗೆಲ್ತಾರೆ, ಈ ಸಲ ಪದಕಪಟ್ಟೀಲಿ ನಾವೇ ಟಾಪಲ್ಲಿರ್ತೀವಿ ನೋಡ್ತಿರು...’

‘ಕರೆಕ್ಟ್, ಅದಕ್ಕೆ ಕಾರಣ ನಾವು... ಮಹಿಳೆಯರು, ನಾವೇ ಜಾಸ್ತಿ ಪದಕ ಗೆಲ್ಲೋದು...’

ADVERTISEMENT

‘ಯಾಕೋ... ನಾವು ಪುರುಷರು ಏನ್ ಕಮ್ಮಿ?’

‘ಪುರುಷರಿಗೆ ಬೇರೆ ಬೇರೆ ಸ್ಪರ್ಧೆ
ಇಟ್ಟಿದ್ರೆ ಪದಕ ಗೆಲ್ತಿದ್ರು ಅನ್ಸುತ್ತೆ...’

‘ಬೇರೆ ಸ್ಪರ್ಧೆನಾ? ಯಾವವು?’

‘ದುಡ್ಡು ಹೊಡಿಯೋ ಸ್ಪರ್ಧೆ, ಹೊಡೆದ ದುಡ್ಡನ್ನ ಎಲ್ಲೆಲ್ಲಿ ಬಚ್ಚಿಡಬಹುದು
ಅನ್ನೋ ಸ್ಪರ್ಧೆ, ಪಕ್ಷದಿಂದ ಪಕ್ಷಕ್ಕೆ ಹಾರೋ ಸ್ಪರ್ಧೆ, ಮಂತ್ರಿಗಿರಿಗೆ ಲಾಬಿ ಮಾಡೋ
ಸ್ಪರ್ಧೆ, ದೇಶ ಬಿಟ್ಟು ಪರಾರಿ ಆಗೋ
ಸ್ಪರ್ಧೆ...’

‘ಅದಕ್ಕೆಲ್ಲ ಹೆಂಡ್ತೀರು ಕೂಡಾ ಕಾರಣ ಅಲ್ವೇ, ನಿಮ್ಮ ನೂರೆಂಟು ಆಸೆ ಪೂರೈಸೋಕೆ
ಗಂಡಸರು ದುಡ್ಡು ಹೊಡೀತಾರೆ... ನಿಮಗೂ ಹೊಸ ಹೊಸ ಸ್ಪರ್ಧೆ ಇಟ್ಟಿದ್ರೆ ಎಲ್ಲ ಪದಕ
ನೀವೇ ಗೆಲ್ತಿದ್ರಿ..’

‘ಹೊಸ ಸ್ಪರ್ಧೆನಾ? ಯಾವವು?’

‘ಅಡುಗೆ ಮನೇಲಿ ಪಾತ್ರೆ ಬಿಸಾಕೋ
ಸ್ಪರ್ಧೆ, ಮಾತು ಮಾತಿಗೆ ಕಣ್ಣೀರು ಹಾಕೋ ಸ್ಪರ್ಧೆ, ಗಂಟೆಗಟ್ಲೆ ಮೇಕಪ್ ಮಾಡ್ಕಳೋ
ಸ್ಪರ್ಧೆ, ದಿನಗಟ್ಲೆ ಸೀರೆ ಆರಿಸೋ ಸ್ಪರ್ಧೆ... ಇತ್ಯಾದಿ’

‘ಹಾ... ನೆನಪು ಮಾಡಿದ್ದು ಛಲೋ
ಆತು, ಹೊಸ ಸೀರೆ ಯಾವಾಗ ಕೊಡಿಸ್ತೀರಾ?’

‘ಸೀರೆನಾ? ಅಲ್ಲಿ ಅಡುಗೆ ಮನೇಲಿ ಏನೋ ಸೀದ ವಾಸನೆ ಬರ್ತಿದೆ ನೋಡು...’

ಗಂಡನ ಜಾಣತನಕ್ಕೆ ಹೆಂಡತಿಗೂ ನಗು ಬಂತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.