ADVERTISEMENT

ಕೊರೊನಾ ಡೈಲಾಗ್ಸ್

ಆನಂದ ಉಳಯ
Published 20 ಅಕ್ಟೋಬರ್ 2021, 18:28 IST
Last Updated 20 ಅಕ್ಟೋಬರ್ 2021, 18:28 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಅಂದು
ಮಳೆ ಬೆಳೆ ಹೇಗಿದೆ?
ಎಷ್ಟು ಮಕ್ಕಳು? ಗಂಡೆಷ್ಟು ಹೆಣ್ಣೆಷ್ಟು?
ಮಗನಿಗೆ ಕೆಲಸ ಸಿಕ್ಕಿತೆ? ಸದ್ಯ, ನಿಮಗೊಂದಿಷ್ಟು ರಿಲೀಫ್ ಈಗ.
ಮಗಳಿಗೆ ಮದುವೆ ಆಯಿತೆ? ಮೊಮ್ಮಕ್ಕಳು?
ಸೊಸೆ ಬಂದಳೆ? ಹೊಂದಿಕೊಂಡು ಹೋಗ್ತಾಳೆಯೇ?
ಆರೋಗ್ಯ ಹೇಗಿದೆ? ಸಕ್ಕರೆ ಕಾಯಿಲೆ
ಎಂದಿದ್ದಿರಿ? ಈಗ?
ಬಿ.ಪಿ ಕಂಟ್ರೋಲ್‍ಗೆ ಬಂತೆ? ಒಳ್ಳೇದಾಯ್ತು.
ಮೊಮ್ಮಕ್ಕಳು ಕೈಗೆ ಬಂದರೇನು?
ಮೊಮ್ಮಗು ನರ್ಸರಿಗೆ ಸೇರಿತೆ? ನಿಜ, ಅಡ್ಮಿಷನ್ ಸಿಗೋದು ತುಂಬಾ ಕಷ್ಟ. ಯಾರನ್ನು ಹಿಡಿದಿರಿ?
ಮನೆ ಗೃಹಪ್ರವೇಶವೆ? ಅಂತೂ ಸಾಧಿಸಿಬಿಟ್ರಿ. ಎಷ್ಟು ಚದರ ಇದೆ? ಎಷ್ಟಾಯಿತು? ಹೌದು, ಈಗ ವಿಪರೀತ ಖರ್ಚಾಗುತ್ತೆ. ಏನೋ ಮನೇಂತ ಆಯ್ತಲ್ಲ ಬಿಡಿ, ನೆಮ್ಮದಿಯಿಂದ ಇರಬಹುದು. ಬಾಡಿಗೆ ಮನೆ ತಾಪತ್ರಯ ಇರೊಲ್ಲ.

ಇಂದು
ಏನು ಕೊರೊನಾನೆ? ಅಯ್ಯೋ ಟೆಸ್ಟ್ ಸರಿಯಾಗಿ ಮಾಡಿಸಿದ್ದೀರಾ?
ಮನೇಲೇ ಇದ್ದೀರಾ? ಆಸ್ಪತ್ರೆಗೆ ಹೋಗೊಲ್ಲವೆ? ಒಳ್ಳೆದಾಯ್ತು. ನರ್ಸಿಂಗ್ ಹೋಂನೋರು ಹೀರಿಬಿಡ್ತಾ ಇದ್ದರು. ಬೇಗ ರಿಕವರ್ ಆಗೀಪ್ಪಾ...
ವ್ಯಾಕ್ಸಿನೇಷನ್ ಆಯಿತೆ? ಮೊದಲನೇದು ಅಲ್ವಾ? ಎಲ್ಲಿ ಸರ್ಕಾರಿ ಆಸ್ಪತ್ರೇಲಾ? ವೆರಿ ಗುಡ್. ದುಡ್ಡು ಉಳಿಸಿದಿರಿ. ನಾನು ಪ್ರೈವೇಟ್ ಆಸ್ಪತ್ರೆಗೆ ಹೋದೆ. ಸರ್ಕಾರಿ ಆಸ್ಪತ್ರೆ ಹೇಗಿರುತ್ತೋ ಏನೋ. ಸುಮ್ಮನೆ ರಿಸ್ಕ್ ಯಾಕೇಂತ.

ನನ್ನ ಸೆಕೆಂಡ್ ಡೋಸೂ ಆಯಿತು. ಅದೇ ಪ್ರೈವೇಟ್ ಆಸ್ಪತ್ರೇಲಿ. ನಿಮ್ಮದು ನಾಳೇನಾ? ಅದೇ ಸರ್ಕಾರಿ ಆಸ್ಪತ್ರೇಲಾ? ದುಡ್ಡು ಉಳಿಸಿದಿರಿ ಮತ್ತೆ!

ADVERTISEMENT

ಎರಡೂ ಡೋಸ್ ಆಯಿತು ನಮ್ಮಿಬ್ಬರಿಗೂ. ಇನ್ನೇನು ಧೈರ್ಯದಿಂದ ಇರಬಹುದು ಅಲ್ವೇ? ವ್ಯಾಕ್ಸಿನೇಷನ್ ಹಾಕಿಸಿಕೊಂಡ ಮೇಲೆ ಕೊರೊನಾ ಬರೊಲ್ಲ ಅಂತಾರೆ, ನೋಡಬೇಕು.
ಏನೆಂದಿರಿ? ಬೂಸ್ಟರ್ ಡೋಸ್ ಬೇಕಾಗಿ ಬರಬಹುದು ಅಂತ ಕೆಲವರು ಹೇಳ್ತಿದಾರಾ? ಇಲ್ಲಾರೀ, ಈಗೇನೂ ಮೂರನೆ ಅಲೆ ಹೆದರಿಕೆ ಇಲ್ವಂತೆ. ಇಲ್ಲದಿದ್ರೆ 1ನೇ ತರಗತಿ ತೆಗೆಯೋದಕ್ಕೆ ಪರ್ಮಿಷನ್ ಎಲ್ಲಿ ಸಿಗ್ತಾ ಇತ್ತು?
ಏನೋ ಎಲ್ಲಾ ಮುಗಿದರೆ ಸಾಕು. ರಸ್ತೆ ಬದಿ ಬೋಂಡಾ ತಿಂದು ಒಂದೂವರೆ ವರ್ಷ ಆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.