ADVERTISEMENT

ಚುರುಮುರಿ | ಇವರೇ ವಾಸಿ!

ಬಿ.ಎನ್.ಮಲ್ಲೇಶ್
Published 19 ಜನವರಿ 2023, 19:22 IST
Last Updated 19 ಜನವರಿ 2023, 19:22 IST
   

‘ಹಲೋ... ಸಬ್ ಇನ್‌ಸ್ಪೆಕ್ಟರ್ ತೆಪರೇಸಿ? ನಾನು ಐ.ಜಿ. ಮಾತಾಡ್ತಿದೀನಿ’.

‘ಸರ್ ನಮಸ್ಕಾರ್‍ರಿ... ಹೇಳ್ರಿ ಏನರೆ ಅರ್ಜೆಂಟ್ ಇತ್ತಾ ಸರ್...’

‘ಅಲ್ರೀ ಆ ಎಮ್ಮೆಲ್ಲೆ ಕಡೆ ಯಾರೋ ಒಬ್ಬ ರೌಡೀನ ತಂದು ಲಾಕಪ್‌ನಾಗೆ ಹಾಕೀರಂತಲ್ಲ, ಬಿಡಿ ಅಂದ್ರೆ ಬಿಡ್ತಿಲ್ಲಂತೆ?’

ADVERTISEMENT

‘ಸರ್, ಅವಾ ಭಾರೀ ಹೊಲಸು ಅದಾನ್ರಿ, ನಮಗಾ ಕೆಟ್ಟಾಕೊಳಕ ಮಾತಾಡ್ತಾನ್ರಿ, ಅದ್ಕೇ ಒದ್ದು ಒಳಗಾಕೀನಿ’.

‘ಹಂಗಲ್ರೀ ತೆಪರೇಸಿ, ಅವ ಬೈದ ಅಂತ ನಾವು ನಾಲ್ಕು ಒದೀಬಹುದು, ಅದು ಬಿಟ್ರೆ ಬೇರೇನೂ ಮಾಡಾಕೆ ಬರಲ್ಲ. ಹಂಗಂತ ಎಮ್ಮೆಲ್ಲೆಗಳನ್ನ ಎದುರು ಹಾಕ್ಕಾಬಾರ್ದು’.

‘ಅವನ ಮ್ಯಾಲೆ ಬಾಳ ಕೇಸದಾವು ಸರ್, ರೌಡಿಕೇಸ್‌ನಾಗೆ ಅದಾನ, ಹಫ್ತಾ ವಸೂಲಿ ಮಾಡ್ತಾನ... ಅದೆಲ್ಲ ಹೋಗ್ಲಿ ಸರ್, ಅವನ ಬಾಯಾಗೆ ಒಳ್ಳೇ ಮಾತೇ ಇಲ್ಲ, ಬರೀ ಹೊಲಸು ಮಾತಾಡ್ತಾನ. ಅದ್ಕೇ ಸಿಟ್ಟು ಬಂದು ನಾಕು ಬಡೆದೀನ್ರಿ’.

‘ಅಲ್ರೀ ಅವನು ರೌಡಿ ಅಂದ ಮೇಲೆ ಅವನ ಬಾಯಾಗೆ ಮುತ್ತು ಉದುರ್ತಾವೇನು? ಆದ್ರೆ ಈ ಎಮ್ಮೆಲ್ಲೆ ಮಾತು ಕೇಳಿದೀರಾ? ಕೇಳಿದ್ರೆ ಆ ರೌಡೀನೇ ವಾಸಿ ಅನ್ಸುತ್ತೆ...’

‘ಹೌದ್ರಿ ಸರ್, ಪೇಪರ್‌ನಾಗೆ ನೋಡೀನಿ. ಕೆಲವ್ರು ಎಮ್ಮೆಲ್ಲೆಗಳು ಹೆಂಗೆಂಗೆಲ್ಲ ಮಾತಾಡ್ತದಾರೆ, ಪೊಲೀಸರಾದ ನಮಗೇ ನಾಚಿಕಿ ಆಗ್ತತಿ’.

‘ಎಲ್ರೂ ಹಂಗಿರಲ್ಲ ಕಣ್ರಿ, ಆದ್ರು ಇಂಥೋರತ್ರ ನಾವು ಮಾತು ಕೇಳಬೇಕಲ್ಲ’.

‘ವೋಟು ಕೇಳಾಕೆ ಬರುವಾಗ ಎಷ್ಟು ನೈಸಾಗಿ ಮಾತಾಡ್ತಾರೆ ಸರ್, ನಿಮ್ಮ ಸೇವಕ, ಬಂಧು ಅಂತಾರೆ. ಗೆದ್ದ ಮೇಲೆ ಧಮ್ಮು, ತಾಕತ್ತು ಇನ್ನೂ ಏನೇನೋ ಕೊಳಕು ಮಾತಾಡ್ತಾರೆ’.

‘ಅದ್ಕೇ ಹೇಳಿದ್ದು, ಜಾಸ್ತಿ ರಿಸ್ಕ್ ತಗೊಬೇಡಿ, ಆ ರೌಡೀನೇ ವಾಸಿ, ಬಿಟ್ಟು ಕಳಿಸಿ’.

‘ಆತು ಸರ್, ಈಗ್ಲೇ ಬಿಟ್ ಕಳಿಸ್ತೀನಿ, ನಮಸ್ಕಾರ’.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.