ADVERTISEMENT

ಚರ್ಚೆ | RSS ಬಗ್ಗೆ ದೇವನೂರರ ಲೇಖನ: 'ತೀವ್ರ ಆಲೋಚನೆ ಮಾಡಬೇಕು'

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2025, 0:03 IST
Last Updated 11 ಅಕ್ಟೋಬರ್ 2025, 0:03 IST
<div class="paragraphs"><p>ರಾಷ್ಟ್ರೀಯ ಸ್ವಯಂಸೇವಕ ಸಂಘ (ಪ್ರಾತಿನಿಧಿಕ ಚಿತ್ರ)</p></div>

ರಾಷ್ಟ್ರೀಯ ಸ್ವಯಂಸೇವಕ ಸಂಘ (ಪ್ರಾತಿನಿಧಿಕ ಚಿತ್ರ)

   

‘ಕೂಡಿಸುವುದು ದೈವ; ವಿಭಜಿಸುವುದು ದೆವ್ವ’ ಎನ್ನುವುದು ಭಾರತೀಯ ವಿವೇಕ ಎಂದು ಮಹಾದೇವರು ಹೇಳುತ್ತಾರೆ. ಆರ್‌ಎಸ್‌ಎಸ್‌ ಒಂದು ರೀತಿಯಲ್ಲಿ ಡೀಪ್ ನೇಷನ್– ‘ನಾಡ ಜನರ ಹತೋಟಿ ಕೂಟ’ ಎಂದು ದಿನೇಶ್ ನಾರಾಯಣ್ ತಮ್ಮ ಪುಸ್ತಕದಲ್ಲಿ ಹೇಳುತ್ತಾರೆ. ದೇಶದ ಪ್ರತಿ ಪ್ರಜೆ-ಸಂಸ್ಥೆಯನ್ನೂ, ಪ್ರಜಾಪ್ರಭುತ್ವ ಸಂರಚನೆಯಲ್ಲಿನ ಸರ್ಕಾರ, ನ್ಯಾಯಾಂಗ, ಮಿಲಿಟರಿ, ಪೊಲೀಸ್ ಎನ್ನದೇ ಎಲ್ಲವನ್ನೂ ಆರ್‌ಎಸ್‌ಎಸ್‌ ತನ್ನ ಸಿದ್ಧಾಂತದ ಹತೋಟಿಗೆ ತೆಗೆದುಕೊಳ್ಳಲು ಪ್ರಯತ್ನಿಸುತ್ತಲೇ ಇದೆ ಮತ್ತು ನೂರು ವರ್ಷಗಳಲ್ಲಿ ಬಹುಪಾಲು ಯಶವನ್ನೂ ಕಂಡಿದೆ.

ಆರ್‌ಎಸ್‌ಎಸ್‌ ತನ್ನನ್ನು ತಾನು ಕಾನೂನಿನ ಚೌಕಟ್ಟಿನೊಳಗೆ ಎಂದಿಗೂ ನೋಂದಣಿ ಮಾಡಿಕೊಳ್ಳುವುದಿಲ್ಲ. ‘ಶಾಖೆ’ ಎಂಬುದು ಗೋಲ್ವಲ್ಕರ್ ಅವರಿಗೆ ಕಲಿಸಿದ ಬೀಜಮಂತ್ರ. ಅದರ ಸಿದ್ಧಾಂತದ ಗುರಿಯೇ ವ್ಯಕ್ತಿ, ಸಮಾಜ, ನಾಗರಿಕ-ಪ್ರಜಾಪ್ರಭುತ್ವ ಸಂಸ್ಥೆಗಳೆಲ್ಲವನ್ನೂ ಆರ್‌ಎಸ್‌ಎಸ್‌ ಶಾಖೆಯ ತದ್ರೂಪಗಳನ್ನಾಗಿಸುವುದು. ಈ ಕ್ಲೋನಿಂಗ್ ಪ್ರಕ್ರಿಯೆ ಸಫಲವಾದಲ್ಲಿ ಆರ್‌ಎಸ್‌ಎಸ್‌ ಸಿದ್ಧಾಂತವು ದೆವ್ವದ ರೀತಿಯಲ್ಲಿ ವಿರಾಟಪುರುಷ ರೂಪ ತಳೆಯುತ್ತದೆ. ನಂತರದಲ್ಲಿ ನೋಂದಣಿ ಮಾಡಿಸಲು ಯಾವುದೇ ಪ್ರಜಾಪ್ರಭುತ್ವದ ಸಂಸ್ಥೆಗಳೇ ಉಳಿದಿರುವುದಿಲ್ಲ. ಇದನ್ನೇ ‘ಡೀಪ್ ನೇಷನ್’ ಎಂದು ಕರೆಯುವುದು.

ADVERTISEMENT

ಈ ‘ಡೀಪ್ ನೇಷನ್’ನಿಂದ ಮುಕ್ತಿ ಪಡೆಯಲು ಮಹಾದೇವರು ಬಹಳ ಸೌಮ್ಯ ಸಾಂಪ್ರದಾಯಿಕ ನೆಲೆಯಲ್ಲಿ ಪರಿಹಾರವನ್ನು ಸೂಚಿಸಿದ್ದಾರೆ. ಆದರೆ, ಜನರನ್ನು ವಿಭಜಿಸುವ ಆರ್‌ಎಸ್‌ಎಸ್‌ ಸಿದ್ಧಾಂತವನ್ನು ತದ್ರೂಪದಲ್ಲಲ್ಲ, ಮೂಲಘಟಕದಲ್ಲೇ ಕಿತ್ತು ಇಲ್ಲವಾಗಿಸಲು ತೀವ್ರತರವಾದ ಆಲೋಚನೆ ಮಾಡಬೇಕೆಂಬುದು ನನ್ನ ಅಭಿಮತ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.