ADVERTISEMENT

ಹಿರಿಯರಿಗೆ ಸಹಾಯಹಸ್ತ

​ಪ್ರಜಾವಾಣಿ ವಾರ್ತೆ
Published 20 ಜೂನ್ 2018, 19:09 IST
Last Updated 20 ಜೂನ್ 2018, 19:09 IST

ಕರ್ನಾಟಕ ರಾಜ್ಯದ ಸಮ್ಮಿಶ್ರ ಸರ್ಕಾರವು 2018–19ಕ್ಕೆ ಪರಿಷ್ಕೃತ ಮುಂಗಡ ಪತ್ರ ಮಂಡಿಸುವುದು ಹಲವು ನೆಲೆಗಳಿಂದ ಸಮಂಜಸವೆನಿಸುತ್ತದೆ. ರಾಜ್ಯದ ಆದಾಯ– ವೆಚ್ಚಗಳನ್ನು ಅನೇಕ ವಿಧದಲ್ಲಿ ಪರ್ಯಾಲೋಚಿಸಿ ಮತ್ತು ಅವುಗಳನ್ನು ಆರ್ಥಿಕ ತಜ್ಞರ ಗಮನಕ್ಕೆ ತಂದು ಅವರ ಸಲಹೆ–ಸೂಚನೆ ಪಡೆದು ಹೊಸ ಕಾರ್ಯಕ್ರಮಗಳನ್ನು ರೂಪಿಸಬೇಕಿದೆ.

ಅಂತೆಯೇ ಜನಸಾಮಾನ್ಯರ ಮೇಲೆ ಹೆಚ್ಚಿನ ಹೊರೆಯನ್ನೂ ಹಾಕದೆ ಅವರಿಗೆ ಅಗತ್ಯ ಸವಲತ್ತುಗಳನ್ನು ಒದಗಿಸಬೇಕು. ಶಿಕ್ಷಣ ವೆಚ್ಚ ತಗ್ಗಿಸಬೇಕು. ಹಿರಿಯ ನಾಗರಿಕರಿಗೆ ಅನುಕೂಲ ಕಲ್ಪಿಸಬೇಕು. ನಿರ್ದಿಷ್ಟ ತಿಂಗಳ ಆದಾಯ ಇಲ್ಲದ ನಿವೃತ್ತರಿಗೆ ಯಾವುದಾದರೂ ಒಂದು ರೀತಿಯಲ್ಲಿ ಆರ್ಥಿಕ ಸಹಾಯ ಒದಗಿಸಬೇಕು. ಇಳಿ ವಯಸ್ಸಿನಲ್ಲಿ ಅವರು ತುಸು ನೆಮ್ಮದಿಯಿಂದ ಬದುಕು ಸಾಗಿಸಲು ಸಹಾಯಹಸ್ತ ಚಾಚಬೇಕು.

–ಎಸ್. ಗೋಪಾಲ್, ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.