ADVERTISEMENT

ನುಡಿ ಬೆಳಗು | ಜನಾರ್ದನ ಸೇವೆ

ರೇಣುಕಾ ನಿಡಗುಂದಿ
Published 19 ಫೆಬ್ರುವರಿ 2026, 22:30 IST
Last Updated 19 ಫೆಬ್ರುವರಿ 2026, 22:30 IST
<div class="paragraphs"><p>ನುಡಿ ಬೆಳಗು</p></div>

ನುಡಿ ಬೆಳಗು

   

ಸ್ವಾಮಿ ವಿವೇಕಾನಂದರು ಒಮ್ಮೆ ಒಂದು ಕಥೆಯನ್ನು ಹೇಳಿದರು: ‘ಒಬ್ಬ ಸನ್ಯಾಸಿಯು ತನ್ನ ಜೀವನವನ್ನು ಧ್ಯಾನದಲ್ಲಿ ಕಳೆಯುತ್ತಿದ್ದನು. ಒಂದು ದಿನ, ಒಂದು ಗ್ರಾಮದಲ್ಲಿ ಪ್ರವಾಹ ಬಂದಾಗ, ಆತನು ತನ್ನ ಧ್ಯಾನವನ್ನು ಬಿಟ್ಟು, ಗ್ರಾಮಸ್ಥರಿಗೆ ಸಹಾಯ ಮಾಡಲು ಓಡಿಹೋಗುತ್ತಾನೆ. ಶಿಷ್ಯರು ಆಶ್ಚರ್ಯಗೊಂಡು, ‘ಸನ್ಯಾಸಿಯ ಕರ್ತವ್ಯ ಧ್ಯಾನವಲ್ಲವೇ?’ ಧ್ಯಾನ ಬಿಟ್ಟು ಓಡಿದ್ದೇಕೆ?’ ಎಂದು ಕೇಳುತ್ತಾರೆ. ಆಗ ಸನ್ಯಾಸಿಯು ಉತ್ತರಿಸಿದನು, ‘ದೇವರ ಸೇವೆಯು ಕೇವಲ ಧ್ಯಾನದಿಂದಲ್ಲ, ಜನರ ಸೇವೆಯಿಂದಲೂ ಸಾಧ್ಯ. ನಾನು ಜನರನ್ನು ಸೇವಿಸುವ ಮೂಲಕ ದೇವರನ್ನೇ ಸೇವಿಸುತ್ತಿದ್ದೇನೆ.’ ಸ್ವಾಮಿಯವರು ಈ ಕಥೆಯನ್ನು ಹೇಳಿ, ‘ನಿಮ್ಮ ಕೆಲಸವನ್ನು ದೇವರಿಗೆ ಸಮರ್ಪಿಸಿದರೆ, ಅದು ಭಕ್ತಿಯಾಗುತ್ತದೆ’ ಎಂದರು.

ಗ್ರೇಟರ್ ನೊಯಿಡಾದಲ್ಲಿ ಒಂದು ಘಟನೆ ನಡೆಯಿತು. ಎಲುಬು ಸೀಳುವ ಕಡುಚಳಿಯಲ್ಲಿ ಇಬ್ಬನಿ ಮುಸುಕಿದ ಮಧ್ಯರಾತ್ರಿಯಲ್ಲಿ ಕಣ್ಣಿಗೆ ಏನೂ ಕಾಣಿಸಿದ ಹೊತ್ತಿನಲ್ಲಿ ಒಬ್ಬ ಯುವಕನು ತಡೆಗೋಡೆ ಬಿದ್ದು ಹೋದ ಒಂದು ಒಳಚರಂಡಿಯ ನಾಲೆಗೆ ತನ್ನ ಕಾರು ಸಹಿತ ಬಿದ್ದ. ಆತ ತನ್ನ ಕಾರಿನ ಚಾವಣಿಯ ಮೇಲೆ ನಿಂತು ಸುಮಾರು ಎರಡು ಗಂಟೆ ಸಹಾಯಕ್ಕಾಗಿ ಕೂಗುತ್ತಿದ್ದರೂ ಯಾರೊಬ್ಬರೂ ಮುಂದೆ ಬರುವುದಿಲ್ಲ. ಘಟನಾ ಸ್ಥಳಕ್ಕೆ ಪೋಲೀಸ್ ಪಡೆ ಬರುತ್ತದೆ, ಅಗ್ನಿಶಾಮಕ ದಳದವರು ಬರುತ್ತಾರೆ. ಎನ್‌ಡಿಆರ್‌ಎಫ್‌ (ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ) ಬರುತ್ತದೆ. ಆದರೆ ಅವರು ಬರುವ ಹೊತ್ತಿಗೆ ತಡವಾಗಿ ಹೋಗಿತ್ತು. ಬಂದರೂ ಕೊರೆವ ಚಳಿಯಲ್ಲಿ ಮಂಜುಗಡ್ಡೆಯಂತಹ ನೀರಿಗಿಳಿದು ಯುವಕನನ್ನು ರಕ್ಷಿಸಲು ಯಾರೂ ಮುಂದಾಗುವುದಿಲ್ಲ. ಆದರೆ ದಾರಿಯಲ್ಲಿ ಹೋಗುತ್ತಿದ್ದ ಒಬ್ಬ ಡೆಲಿವರಿ ಹುಡುಗ ತನ್ನ ಬಟ್ಟೆ ಕಳಚಿ ಸೊಂಟಕ್ಕೆ ಹಗ್ಗ ಬಿಗಿದುಕೊಂಡು ಕೊಳಚೆ ನೀರಿಗಿಳಿದು ಹುಡುಕುವ ಪ್ರಯತ್ನ ಮಾಡಿದರೂ ಪ್ರಯೋಜನವಾಗಲಿಲ್ಲ.

ADVERTISEMENT

ಇಲ್ಲಿ ತನ್ನ ಪ್ರಾಣದ ಚಿಂತೆಯನ್ನೂ ತೊರೆದು ಕಡುಚಳಿಯಲ್ಲಿ ಕೊಳಚೆ ನೀರಿಗಿಳಿದ ಹುಡುಗನ ಮಾನವೀಯತೆಗೆ ಕೈಮುಗಿಯಬೇಕು. ಎಷ್ಟು ಜನ ಹೀಗೆ ಇನ್ನೊಬ್ಬರ ಜೀವ ಉಳಿಸಲು ಮುಂದೆ ಬರುತ್ತಾರೆ? ರಸ್ತೆ ಅಪಘಾತದಲ್ಲಂತೂ ಅಲ್ಲೇನು ಆಗಿದೆ ಎಂದು ಕುತೂಹಲಕ್ಕೆ ನಿಂತು ನೋಡಿ ಜಾಗ ಖಾಲಿ ಮಾಡುತ್ತಾರೆಯೇ ಹೊರತು ಆಸ್ಪ‌ತ್ರೆಗೆ ಸಾಗಿಸಲು ಧೈರ್ಯ ಮಾಡುವವರು ತೀರಾ ವಿರಳ.

ಈ ಕಥೆಯ ಮೂಲಕ ಸ್ವಾಮಿಯವರು ಕರ್ಮಯೋಗವನ್ನು ಕಲಿಸಿದರು. ದೈನಂದಿನ ಕೆಲಸವನ್ನು ನಿಸ್ವಾರ್ಥ ಭಾವದಿಂದ ಮಾಡಿದರೆ, ಅದು ದೇವರಿಗೆ ಸೇವೆಯಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.