ADVERTISEMENT

ಗುರುವಾರ, 13-6-1963

​ಪ್ರಜಾವಾಣಿ ವಾರ್ತೆ
Published 12 ಜೂನ್ 2013, 19:59 IST
Last Updated 12 ಜೂನ್ 2013, 19:59 IST

ಹಟ್ಟಿ ಚಿನ್ನದ ಗಣಿ ಮುಚ್ಚುವುದಿಲ್ಲ: ಅಭಿವೃದ್ಧಿ ಪಡಿಸಲು ರಾಜ್ಯದ ನಿರ್ಧಾರ
ರಾಯಚೂರು, ಜೂನ್ 12 - ಹಟ್ಟಿ ಚಿನ್ನದ ಗಣಿಯನ್ನು ಮುಚ್ಚುವುದಿಲ್ಲ ವೆಂದೂ, ಅದರ ಅಭಿವೃದ್ಧಿ ಹಾಗೂ ವಿಸ್ತರಣೆ ಕೆಲಸ ಮುಂದುವರಿಯು ವುದೆಂದೂ ಮೈಸೂರಿನ ವಾಣಿಜ್ಯ ಹಾಗೂ ಕೈಗಾರಿಕೆ ಸಚಿವ ಶ್ರೀ ಕೆ. ಮಲ್ಲಪ್ಪನವರು ಇಲ್ಲಿ ಇಂದು ಪತ್ರಕರ್ತರಿಗೆ ತಿಳಿಸಿದರು.

ಚಿನ್ನವನ್ನು ಮಿತವಾದ ಖರ್ಚಿನಲ್ಲಿ ಉತ್ಪಾದಿಸದಿದ್ದರೆ ಕೋಲಾರ ಚಿನ್ನದ ಗಣಿಯನ್ನು, ಕೇಂದ್ರ ಸರ್ಕಾರ ಮುಚ್ಚುವುದಾಗಿ ಹಣಕಾಸು ಮಂತ್ರಿ ಶ್ರೀ ಮೊರಾರ‌್ಜಿ ದೇಸಾಯಿ ಹೇಳಿದ ಹಿನ್ನೆಲೆಯಲ್ಲಿ ಹಟ್ಟಿ ಗಣಿಯ ಭವಿಷ್ಯವೇನು ಎಂದು ಸಚಿವರನ್ನು ಪ್ರಶ್ನಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.