ADVERTISEMENT

ಗುರುವಾರ, 19–12–1963

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2013, 19:30 IST
Last Updated 18 ಡಿಸೆಂಬರ್ 2013, 19:30 IST

ನಾಟಕ ನಿಷೇಧಕ್ಕೆ ಅಧಿಕಾರ: ಮಸೂದೆ ಅಂಗೀಕಾರ
ಬೆಂಗಳೂರು, ಡಿ. 18–
ಆಕ್ಷೇಪಣೀಯ­ವೆಂದು ಕಂಡು ಬಂದ ನಾಟಕಗಳ ಅಭಿ­ನಯ­ವನ್ನು ನಿಷೇಧಿಸಲು ಸರ್ಕಾರಕ್ಕೆ ಅಧಿಕಾರ ನೀಡುವ ಮೈಸೂರು ನಾಟಕ ಮಸೂದೆಯು ಇಂದು ವಿಧಾನ ಸಭೆ­ಯಲ್ಲಿ ಅಂಗೀಕೃತವಾಯಿತು.

ಸೆಲಕ್ಟ ಸಮಿತಿಯು ಪರಿಷ್ಕರಿಸಿದ ಈ ಮಸೂದೆ­ಯ ಮೇಲೆ ಇಂದು ಎರಡು ಗಂಟೆಗಳ ಕಾಲ ನಡೆದ ಚರ್ಚೆಯಲ್ಲಿ ಹೆಚ್ಚಿನ ಕಾವು ಇರಲಿಲ್ಲ. ಮಾತನಾಡಿದ ವಿರೋಧ ಪಕ್ಷದ ಆರು ಮಂದಿ ಸದಸ್ಯರೂ, ಮಸೂದೆಯು ನಾಟಕ ಕಲೆಯ ಅಭಿವೃದ್ಧಿಗೆ ಕಂಟಕಪ್ರಾಯವಾಗುವುದೆಂದು ಅಭಿಪ್ರಾಯಪಟ್ಟರು.

ಯು.ಪಿ.ಎಸ್‌.ಸಿ. ಪರೀಕ್ಷೆ ಹಿಂದಿಯಲ್ಲಿ ನಡೆಸುವ ಬಗ್ಗೆ ಇನ್ನೂ ನಿರ್ಧಾರವಿಲ್ಲ
ನವದೆಹಲಿ, ಡಿ. 18–
ಯೂನಿಯನ್‌ ಪಬ್ಲಿಕ್‌ ಸರ್ವಿಸ್‌ ಕಮಿಷನ್‌ ಪರೀಕ್ಷೆಗಳನ್ನು ಹಿಂದಿ ಮಾಧ್ಯಮದಲ್ಲಿ ನಡೆಸುವುದಕ್ಕೆ ಯಾವ ಖಚಿತ ತಾರೀಖನ್ನೂ ಗೊತ್ತುಪಡಿಸಿಲ್ಲವೆಂದು ಕೇಂದ್ರ ಗೃಹ ಮಂತ್ರಿ ಶ್ರೀ ಜಿ. ಎಲ್‌. ನಂದಾರವರು ಇಂದು ಲೋಕಸಭೆಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT