ADVERTISEMENT

ಗುರುವಾರ, 26–9–1963

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2013, 19:59 IST
Last Updated 25 ಸೆಪ್ಟೆಂಬರ್ 2013, 19:59 IST

ಲಾಲ್‌ಬಾಗಿನಲ್ಲಿ ಕಂಚಿನ ಪ್ರತಿಮೆ ಕಣ್ಮರೆ
ಬೆಂಗಳೂರು, ಸೆ. 25–  ಕರ್ನಾಟಕದ ರಾಜಧಾನಿ ಬೆಂಗಳೂರಿನ ಕಳ್ಳರೂ ಕಲಾಭಿಮಾನಿಗಳಾದಂತೆ ಕಂಡುಬರು ತ್ತಿದೆ. ಈ ‘ಕಲಾಭಿಮಾನಿ’ಗಳ ಕಣ್ಣು ದಿನವೂ ಸಾವಿರಾರು ಮಂದಿಯ ಕಣ್ಮನ ತಣಿಸುತ್ತಿದ್ದ ಲಾಲ್‌ಬಾಗ್‌ನಲ್ಲಿನ ಅಶ್ವಾರೋಹಿ ಶ್ರೀ ಚಾಮರಾಜ ಒಡೆಯರ್‌ರವರ ಪ್ರತಿಮೆಯ ಬಳಿ ಇದ್ದ ಕಲಾತ್ಮಕ ವಿಗ್ರಹಗಳ ಮೇಲೆ ಬಿದ್ದಿದೆ.

ಒಡೆಯರ ಪ್ರತಿಮೆಯಿರುವ ಪೀಠದ ಮೇಲೆಯೇ ಇಡಲಾಗಿದ್ದ ಎರಡು ಪುಟ್ಟ ನಗ್ನ ಪ್ರತಿಮೆಗಳನ್ನು ಯಾರೋ ಅಪಹರಿಸಿದ್ದಾರೆ. ಅದೇ ರೀತಿಯ ಮತ್ತೊಂದು  ವಿಗ್ರಹದ  ಒಂದರ ರೆಕ್ಕೆ ಮುರಿದಿದೆ. ನಾಲ್ಕು ವಿಗ್ರಹಗಳಲ್ಲಿ ಒಂದು ಮಾತ್ರ ಮೊದಲಿನಂತೆ ಉಳಿದಿದೆ.

50 ವರ್ಷದಿಂದ  ಅಲ್ಲಿದ್ದ ಕಂಚಿನ  ಈ ಪ್ರತಿಮೆಗಳನ್ನು ಇದೇ ತಿಂಗಳು 14 ರಂದು ರಾತ್ರಿ ಕದಿಯಲಾಗಿದೆಯೆಂದು ಶಂಕಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.