
ಪ್ರಜಾವಾಣಿ ವಾರ್ತೆನವದೆಹಲಿ, ಜೂನ್ 22 - ಕಾರಾಕೊರಂ ಕಣಿವೆಗೆ ಇರುವ ಸಾಂಪ್ರದಾಯಿಕ ಭಾರತೀಯ ಮಾರ್ಗದಲ್ಲಿರುವ ದೇಪ್ಸಾಂಗ್ ಲಾಗೆ ಈಶಾನ್ಯದಲ್ಲಿ 1200 ಗಜ ದೂರದಲ್ಲಿ ಠಾಣ್ಯವೊಂದನ್ನು ಸ್ಥಾಪಿಸಿ ಕಟ್ಟಡವೊಂದನ್ನು ನಿರ್ಮಿಸಿ ಚೀಣವು ಲಡಕ್‌ನಲ್ಲಿ ಹೊಸದಾಗಿ ದುರಾಕ್ರಮಣ ನಡೆಸಿದೆ.
ಗಡಿಯ ಪಶ್ಚಿಮ ಭಾಗದಲ್ಲಿ (ಲಡಕ್‌ನಲ್ಲಿ) ಚೀಣವು ಕೊಲಂಬೋ ಸಲಹೆಗಳನ್ನು ಅಲಕ್ಷಿಸಿ ಏಕಪಕ್ಷೀಯವಾಗಿ ಸ್ಥಾಪಿಸಿರುವ ಏಳು ಪೌರ ಠಾಣ್ಯಗಳ ಜತೆಗೆ ಈ ಹೊಸ ನೆಲೆ ಸ್ಥಾಪಿತವಾಗಿದೆ.
ಚೀಣದ ಈ ಇತ್ತೀಚಿನ ದುರಾಕ್ರಮಣ ಕೃತ್ಯಕ್ಕೆ ಭಾರತ ಸರ್ಕಾರ ಜೂನ್ 17ರಂದು ಕಳಿಸಿರುವ ಪತ್ರದಲ್ಲಿ ಉಗ್ರವಾಗಿ ಪ್ರತಿಭಟಿಸಿ, ಹೊಸನೆಲೆಯು ಚೀಣ ಸರ್ಕಾರವೇ ರೂಪಿಸಿರುವ ನಿಸ್ಸೇನೀಕೃತ ವಲಯದಲ್ಲಿದೆಯೆಂದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.