`ಆಕ್ರಮಣಕಾರಿ ನೀತಿ ತ್ಯಜಿಸಲು ಚೀಣಾಕ್ಕೆ ಸಲಹೆ~
ನವದೆಹಲಿ, ಮಾ. 12 - ಭಾರತ ಮತ್ತು ಚೀಣಗಳ ನಡುವೆ ಹೊಸ ಒಪ್ಪಂದವೊಂದು ಆಗುವ ವಿಷಯದಲ್ಲಿ ಸಂಧಾನ ನಡೆಯುವುದಕ್ಕೆ ಮುಂಚೆ ತನ್ನ ಆಕ್ರಮಣಕಾರಿ ನೀತಿಗಳನ್ನು ರದ್ದುಗೊಳಿಸಿ, ಶಾಂತಿಯ ವಾತಾವರಣವನ್ನು ಮತ್ತೆ ಉಂಟುಮಾಡಬೇಕೆಂದು ಭಾರತವು ಚೀಣಕ್ಕೆ ತಿಳಿಸಿದೆ ಎಂದು ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದರು ಇಂದು ಪಾರ್ಲಿಮೆಂಟಿನ ಜಂಟಿ ಅಧಿವೇಶನದಲ್ಲಿ ತಿಳಿಸಿದರು.
ರಾಜ್ಯಕ್ಕೆ 14 ಮಂದಿ ಸಚಿವರು
10 ಜನ ಉಪಮಂತ್ರಿಗಳು
ಬೆಂಗಳೂರು, ಮಾ. 12 - ರಾಜ್ಯದ ನೂತನ ಮಂತ್ರಿ ಮಂಡಲದಲ್ಲಿ 14 ಮಂದಿ ಸಚಿವರು ಹಾಗೂ 10 ಉಪಸಚಿವರು ಇರುವರೆಂದು ಇಂದು ಸಂಜೆ ವರದಿಗಾರರಿಗೆ ತಿಳಿಸಿದ ಮುಖ್ಯಮಂತ್ರಿ ಶ್ರೀ ಎಸ್. ಆರ್. ಕಂಠಿ ಅವರು ಬುಧವಾರ ಬೆಳಿಗ್ಗೆ ತಮ್ಮ ಸಚಿವ ಸಂಪುಟವನ್ನು ಪ್ರಕಟಿಸುವುದಾಗಿ ಹೇಳಿದರು. ಹೈಕಮಾಂಡಿನೊಡನೆ ಚರ್ಚಿಸಿ ಇಂದು ಬೆಳಿಗ್ಗೆ ನಗರಕ್ಕೆ ಹಿಂದಿರುಗಿದ ಮುಖ್ಯಮಂತ್ರಿಗಳು ಇಂದು ಮಂತ್ರಿ ಮಂಡಲದ ಸ್ವರೂಪದ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿಲ್ಲವೆಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.