ಖ್ರುಶ್ಚೋವ್ - ಕೆನಡಿ ಭೇಟಿ ಖಚಿತ
ನವದೆಹಲಿ, ಸೆ.12 - ಬರ್ಲಿನ್ ಪ್ರಶ್ನೆ ಸಂಬಂಧ ಎರಡು ಶಕ್ತಿ ಬಣಗಳ ನಾಯಕರ ನಡುವೆ ಭೇಟಿ ನಡೆಯುವುದೆಂಬ ವಿಶ್ವಾಸವಿರುವುದಾಗಿ ಪ್ರಧಾನ ಮಂತ್ರಿ ನೆಹರೂರವರು ಇಲ್ಲಿ ಇಂದು ಹೇಳಿದರು.
ರಾಜ್ಯಾದ್ಯಂತ ಏಕ ರೂಪ ಗೇಣಿ
ಬೆಂಗಳೂರು, ಸೆ. 12 - ಮುಂಬೈ ಹಾಗೂ ಹೈದರಾಬಾದ್ ಕರ್ನಾಟಕ ಪ್ರದೇಶಗಳಲ್ಲಿ ಈಗ ಜಾರಿಯಲ್ಲಿರುವಂತೆ ಗೇಣಿ ಪ್ರಮಾಣವನ್ನು ರಾಜ್ಯಾದ್ಯಂತ ನಿಗದಿಯಾದ ಹೆಚ್ಚಿನ ಮಟ್ಟದ ಗೇಣಿಗೆ ಏರಿಸುವಂತಾಗುವ ತಿದ್ದುಪಡಿಯನ್ನು ಇಂದು ವಿಧಾನ ಸಭೆ ಅಂಗೀಕರಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.