
ಪ್ರಜಾವಾಣಿ ವಾರ್ತೆ
ಸಣ್ಣ ಕಾರು ಯೋಜನೆ: ಪ್ರಸಕ್ತ ವರ್ಷ ಆಖೈರು ನಿರ್ಧಾರ
ಮದರಾಸು, ಜೂ. 17– ಸಣ್ಣ ಕಾರು ತಯಾರಿಕೆ ವಿಚಾರದಲ್ಲಿ ಕೇಂದ್ರ ಸರ್ಕಾರ ಈ ವರ್ಷದಲ್ಲೇ ನಿರ್ಧಾರ ಕೈಗೊಳ್ಳಲಿದೆಯೆಂದು ಕೈಗಾರಿಕಾಭಿವೃದ್ಧಿ ಸಚಿವ ಭಾನುಪ್ರಕಾಶ್ ಸಿಂಗ್ ಅವರು ಇಲ್ಲಿ ಇಂದು ಸುದ್ದಿಗಾರರಿಗೆ ತಿಳಿಸಿದರು.
ಸಣ್ಣ ಕಾರು ಯೂನಿಟ್ ಸ್ಥಾಪನೆಗೆ ಸಂಬಂಧಿಸಿದ ಯೋಜನೆಯನ್ನು ತುರ್ತು ಪರಿಶೀಲನೆಗಾಗಿ ಯೋಜನಾ ಆಯೋಗಕ್ಕೆ ಸಲ್ಲಿಸಲಾಗುವುದೆಂದು ಅವರು ವಿವರಿಸಿದರು.
ಆದಿಚುಂಚನಗಿರಿ ಸ್ವಾಮಿಗಳಿಗೆ ನಗರದ ಭಕ್ತವೃಂದದ ಶ್ರದ್ಧೆ, ಗೌರವದ ಸ್ವಾಗತ
ಬೆಂಗಳೂರು, ಜೂ. 17– ಸಂಸ್ಥಾನಾಧಿಕಾರ ಸ್ವೀಕರಿಸಿದ ಬಳಿಕ ಬೆಂಗಳೂರಿಗೆ ಪ್ರಥಮವಾಗಿ ದರ್ಶನ ನೀಡುತ್ತಿರುವ ಆದಿಚುಂಚನಗಿರಿಯ 70ನೇ ಮಠಾಧೀಶ ಶ್ರೀ ಜಗದ್ಗುರು ಶ್ರೀರಾಮಾನಂದನಾಥ ಸ್ವಾಮಿಗಳವರಿಗೆ ನಗರದ ಸಹಸ್ರಾರು ಆಸ್ತಿಕರ ವೃಂದ, ಶ್ರದ್ಧೆಯ ಸ್ವಾಗತ ಬಯಸಿ, ಭಕ್ತಿಯ ನಮನ ಅರ್ಪಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.