ADVERTISEMENT

ಮಂಗಳವಾರ, 27-9-1961

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2011, 19:30 IST
Last Updated 26 ಸೆಪ್ಟೆಂಬರ್ 2011, 19:30 IST

ಪಂಜಾಬಿ ಸುಬಾ ಬೇಡಿಕೆ ಬಗ್ಗೆ ಸಂಧಾನ ಭಗ್ನ
ಅಮೃತಸರ, ಸೆ. 26 - ಪಂಜಾಬಿ ಸುಬಾ ಬೇಡಿಕೆ ಬಗ್ಗೆ, ಸರ್ಕಾರದೊಡನೆ ತಾವು ನಡೆಸಿದ ಮಾತುಕತೆ ಮುರಿದು ಬಿದ್ದವು ಎಂಬುದಾಗಿ ಅಕಾಲಿದಳದ ಸಲಹೆಗಾರ ಸರ್ದಾರ್ ಗುರ‌್ನಾಂಸಿಂಗ್ ಇಂದು ಇಲ್ಲಿ ಪ್ರಕಟಿಸಿದರು. ಸರ್ಕಾರದ ಸಲಹೆಯನ್ನುಅಕಾಲಿದಳ ಕಾರ್ಯನಿರ್ವಾಹಕ ಸಮಿತಿಯು  ತಿರಸ್ಕರಿಸಿದೆ.

ಅರಸೀಕೆರೆಗೆ ನಟನಟಿಯರು
ಅರಸೀಕೆರೆ, ಸೆ. 26 - ಪ್ರವಾಹ ಸಂತ್ರಸ್ತರ ಪರಿಹಾರಕ್ಕಾಗಿ ನಿಧಿ ಸಂಗ್ರಹಿಸಲು ರಾಜ್ಯಾದ್ಯಂತ ಪ್ರವಾಸ ಹೊರಟಿರುವ ಕನ್ನಡ ಚಲನಚಿತ್ರ ಕಲಾವಿದರು ಇಂದು ಬೆಳಿಗ್ಗೆ ಮೈಸೂರು ನಗರದ ಸಯ್ಯಾಜಿರಾವ್ ರಸ್ತೆ, ಸಂತೆಪೇಟೆ, ಶ್ರೀರಾಮಪೇಟೆ ಹಾಗೂ ಧನ್ವಂತರಿ ರಸ್ತೆಗಳಲ್ಲಿ ನಿಧಿ ಸಂಗ್ರಹಿಸಿದ ಬಳಿಕ ಕೃಷ್ಣರಾಜಪೇಟೆ, ಚನ್ನರಾಯಪಟ್ಟಣ, ಹಾಸನಗಳಿಗೆ ಭೇಟಿಯಿತ್ತು, ಸಂಜೆ ಇಲ್ಲಿಗೆ ಆಗಮಿಸಿದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.