ADVERTISEMENT

ಮಂಗಳವಾರ, 4–2–1969

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2019, 19:46 IST
Last Updated 3 ಫೆಬ್ರುವರಿ 2019, 19:46 IST
   

ಅಣ್ಣಾ ಅಂತಿಮ ದರ್ಶನಕ್ಕೆ ನೂಕು ನುಗ್ಗಲು

ಮದ್ರಾಸ್, ಫೆ. 3– ಸಾರ್ವಜನಿಕ ದರ್ಶನಕ್ಕಾಗಿ ಶ್ರೀ ಅಣ್ಣಾದೊರೆ ಅವರ ಪಾರ್ಥಿವ ಶರೀರವನ್ನಿಟ್ಟಿರುವ ರಾಜಾಜಿ ಹಾಲ್ ಬಳಿ ಇಂದು ಬೆಳಿಗ್ಗೆ ನೂಕು ನುಗ್ಗಲಿನಲ್ಲಿ ಹಾಗೂ ಭವನದ ಒಳಗಡೆ ಉಸಿರು ಸಿಕ್ಕಿಕೊಂಡು ಐದು ಮಂದಿ ಸತ್ತರೆಂದು ವರದಿಯಾಗಿದೆ.

ತಮಿಳುನಾಡಿನ ಜನತೆ ತಮ್ಮ ನಾಯಕ ಅಣ್ಣಾದೊರೆಗೆ ಅಂತಿಮ ಗೌರವವನ್ನು ಸಲ್ಲಿಸುವಂಥ ರುದ್ರಗಂಭೀರ ವಾತಾವರಣ, ಪೊಲೀಸರತ್ತ ಕಲ್ಲುಗಳನ್ನೆಸೆಯುವ, ಪೊಲೀಸರು ಶಿಸ್ತುಗೇಡಿ ಗುಂಪಿನ ಮೇಲೆ ಅಶ್ರುವಾಯು ಪ್ರಯೋಗಿಸುವ ದುರ್ಘಟನೆ
ಗಳಿಂದ ಇಂದು ಬೆಳಿಗ್ಗೆ ಕದಡಿ ಹೋಯಿತು.

ADVERTISEMENT

ಅಣ್ಣಾದೊರೆಯವರ ಪಾರ್ಥಿವ ಶರೀರವನ್ನು ಅವರ ನುಂಗಂಬಾಕಂ ನಿವಾಸದಿಂದ ರಾಜಾಜಿ ಭವನಕ್ಕೆ ಸಾಗಿಸಿದ ನಂತರ ಸುಮಾರು ಏಳುಗಂಟೆ ಕಾಲ, ರಾಜಾಜಿ ಭವನದ ಆವರಣದ ಪ್ರತಿಯೊಂದು ಅಂಗುಲವನ್ನೂ ತುಂಬಿದ ಗುಂಪನ್ನು ಶಿಸ್ತಿನಿಂದಿಡಲು ಪೊಲೀಸರು ಸತತ ಹೋರಾಟವನ್ನೇ ನಡೆಸಬೇಕಾಯಿತು.

ಪಲಿಮಾರು ಶ್ರೀಗಳಿಂದ ಸನ್ಯಾಸತ್ವ ತ್ಯಾಗ

ಉಡುಪಿ, ಫೆ. 3– ಉಡುಪಿ ಅಷ್ಟಮಠಕ್ಕೆ ಸೇರಿದ ಪಲಿಮಾರು ಮಠದ ಶ್ರೀ ರಘುವಲ್ಲಭ ತೀರ್ಥರು ಇಂದು ಸನ್ಯಾಸ ಪಟ್ಟವನ್ನು ತ್ಯಜಿಸಿದರು.

ಅಷ್ಟಮಠಗಳ 700 ವರ್ಷ ಇತಿಹಾಸದಲ್ಲಿ ಸನ್ಯಾಸಪಟ್ಟ ತ್ಯಜಿಸಿರುವ ಪ್ರಕರಣ ಇದು. ಶ್ರೀ ಪೇಜಾವರ ಶ್ರೀಗಳ ನೇತೃತ್ವದಲ್ಲಿ ಪಲಿಮಾರು ಮಠದ ಸಾನ್ನಿಧ್ಯವನ್ನು ಶ್ರೀ ಭಂಡಾರಿಕೇರಿ ಶ್ರೀಗಳವರಿಗೆ ಒಪ್ಪಿಸಿಕೊಡುವ ಸರಳ ಸಮಾರಂಭ ಇಂದು ಪಲಿಮಾರು ಮಠದಲ್ಲಿ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.