
ಪ್ರಜಾವಾಣಿ ವಾರ್ತೆನವದೆಹಲಿ, ಡಿ. 12 – ಅಸ್ಸಾಂ – ಪೂರ್ವ ಪಾಕಿಸ್ತಾನ್ ಗಡಿಯಲ್ಲಿ ಪರಿಸ್ಥಿತಿ ಮತ್ತಷ್ಟು ಹದಗೆಡುವುದನ್ನು ತಡೆಯಲೋಸುಗ ಉನ್ನತ ಮಟ್ಟದ ಸಭೆ ಸೇರಲು, ಭಾರತ ಸೇನೆಯ ಮಹಾದಂಡನಾಯಕರು ಪಾಕಿಸ್ತಾನಿ ಸೇನೆಯ ಮಹಾದಂಡನಾಯಕರಿಗೆ ಕರೆ ನೀಡಿದ್ದಾರೆಂದು, ವಿದೇಶಾಂಗ ವ್ಯವಹಾರ ಶಾಖೆಯಲ್ಲಿ ಸಚಿವೆಯಾದ ಶ್ರೀಮತಿ ಲಕ್ಷ್ಮಿ ಮೆನನ್ ಇಂದು ಲೋಕ ಸಭೆಗೆ ತಿಳಿಸಿದರು.
ಸ್ವತಂತ್ರ ಕೀನ್ಯದ ಜನನ
ನೈರೋಬಿ, ಡಿ. 12 – ಅರವತ್ತೆಂಟು ವರ್ಷಗಳ ಕಾಲ ಬ್ರಿಟಿಷ್ ವಸಾಹತಾಗಿದ್ದ ಕೀನ್ಯವು ಇಂದು ಮಧ್ಯರಾತ್ರಿಯಲ್ಲಿ ಸ್ವಾತಂತ್ರ್ಯವನ್ನು ಪಡೆಯಿತು.
ಇಲ್ಲಿನ ಸ್ವಾತಂತ್ರ್ಯ ಮೈದಾನದಲ್ಲಿ ಇಂದು ಮಧ್ಯರಾತ್ರಿಗೆ ಸರಿಯಾಗಿ ಸ್ವಾತಂತ್ರ್ಯ ಕೀನ್ಯದ ಧ್ವಜವನ್ನು ಹಾರಿಸಿದುದನ್ನು ಸುಮಾರು ಎರಡೂವರೆ ಲಕ್ಷ ಜನರು ವೀಕ್ಷಿಸಿ ‘ಉಹುರ’ (ಸ್ವಾತಂತ್ರ್ಯ) ಎಂದು ಘೋಷಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.