ADVERTISEMENT

ರಕ್ಷಣಾ ಸಿದ್ಧತೆ ಯೋಜನೆ: ಚವಾಣ್

ಮಂಗಳವಾರ, 24–3–1964

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2014, 19:30 IST
Last Updated 23 ಮಾರ್ಚ್ 2014, 19:30 IST

ನವದೆಹಲಿ, ಮಾ. 23– ಪಾಕಿಸ್ತಾನ ಮತ್ತು ಚೀನದ ನಡುವಣ ಹೊಸ ಮೈತ್ರಿಯ ಕಾರಣ ಭಾರತದ ಇಡೀ ಉತ್ತರ ಗಡಿಯಲ್ಲಿ ‘ಪ್ರಕ್ಷುಬ್ಧ’ ಪರಿಸ್ಥಿತಿ ಇದೆಯೆಂದು ರಕ್ಷಣಾ ಮಂತ್ರಿ ಶ್ರೀ ವೈ. ಬಿ. ಚವಾಣ್‌ರವರು ಇಂದು ಲೋಕ­ಸಭೆಯಲ್ಲಿ ತಿಳಿಸಿದರು.

ಹಿಂದೆ ಚೀಣದ ಗಡಿಯನ್ನು ರಕ್ಷಿಸು­ವುದರ  ಬಗ್ಗೆ ಗಮನ ಕೇಂದ್ರೀಕರಿಸುವ ‘ಅಪಾಯಕರ’ ಸಾಹಸವನ್ನು ಭಾರತ ಕೈಗೊಂಡಿದ್ದಿತೆಂದೂ ನುಡಿದರು.

ರಾವಲ್ಪಿಂಡಿ–ಪೀಕಿಂಗ್‌ ನಡುವೆ ಹೆದ್ದಾರಿ: ಪ್ರತಿಭಟನೆ
ನವದೆಹಲಿ, ಮಾ. 23–  ರಾವಲ್ಪಿಂಡಿ–ಪೀಕಿಂಗ್‌ ನಡುವೆ ಹೆದ್ದಾರಿ ನಿರ್ಮಿಸುವ ಬಗ್ಗೆ ಚೀಣಾ–ಪಾಕಿಸ್ತಾನಗಳ ಜಂಟಿ ಯತ್ನಕ್ಕೆ ಭಾರತ ತನ್ನ ಪ್ರತಿಭಟನೆಯನ್ನು ಸಲ್ಲಿಸಿದೆ ಎಂದು ಪ್ರಧಾನಮಂತ್ರಿ ನೆಹರೂ ಇಂದು ಲೋಕಸಭೆಯಲ್ಲಿ ತಿಳಿಸಿದರು.

ಭಾರತದ ವಿರೋಧವನ್ನು ಎಲ್ಲ ರಾಷ್ಟ್ರ ಗಳಿಗೂ ತಿಳಿಸಲಾಗಿದೆ ಎಂದೂ ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.