ಲುಮುಂಬ ಪರಾರಿ
ಎಲಿಜಬೆತ್ವಿಲ್, ಫೆ. 10 - ಕಾಂಗೋವಿನ ಮಾಜಿ ಪ್ರಧಾನ ಮಂತ್ರಿ ಪ್ಯಾಟ್ರಿಸ್ ಲುಮುಂಬರವರು ತಮ್ಮ ಸರ್ಕಾರದಲ್ಲಿದ್ದ ಇಬ್ಬರು ಸಚಿವರೊಡನೆ ಸೆರೆಯಿಂದ ನಿನ್ನೆ ರಾತ್ರಿ ಪರಾರಿಯಾಗಿರುವರೆಂದು ಇಂದು ಇಲ್ಲಿ ಪ್ರಕಟಿಸಲಾಗಿದೆ. ಅವರನ್ನು ಕೃಷಿ ಕ್ಷೇತ್ರವೊಂದ ರಲ್ಲಿ
ಬಂಧನದಲ್ಲಿಡಲಾಗಿತ್ತು. ಜನಗಣತಿ ಆರಂಭ
ಬೆಂಗಳೂರು, ಫೆ. 10 - ಮುಖ್ಯಮಂತ್ರಿ ಶ್ರೀ ಬಿ. ಡಿ. ಜತ್ತಿಯವರಿಂದ ವಿವರ ಪಡೆಯುವುದರೊಡನೆ ರಾಜ್ಯದಲ್ಲಿ ಇಂದು 1961ರ ಜನಗಣತಿ ಆರಂಭವಾಯಿತು.ಬೆಳಿಗ್ಗೆ 8 ಗಂಟೆಗೆ ನಗರದ ಜನಗಣತಿ ಕಮೀಷನರಾದ ಕಾರ್ಪೊರೇಷನ್ ಕಮೀಷನರ್ ಪಿ. ಜಿ. ಫರ್ನಾಂಡಿಸ್ ಅವರು ‘ಬಾಲಬ್ರೂಯಿ’ಯಲ್ಲಿ ಗಣತಿಯ ವಿವರಗಳನ್ನು ಪಡೆದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.