ADVERTISEMENT

ಶುಕ್ರವಾರ, 11-3-1961

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2011, 18:30 IST
Last Updated 10 ಮಾರ್ಚ್ 2011, 18:30 IST

ಯಾಂತ್ರೀಕೃತ ಕೃಷಿ ಕ್ಷೇತ್ರಗಳ ಸ್ಥಾಪನೆಗೆ ಶಿಫಾರಸು
ನವದೆಹಲಿ, ಮಾ. 10
- ದೊಡ್ಡ ಪ್ರಮಾಣದ ಕೃಷಿ ಕ್ಷೇತ್ರಗಳ ಬಗ್ಗೆ ನೇಮಕವಾಗಿದ್ದ ದಾಮ್ಲೆ ಸಮಿತಿಯು ಯಾಂತ್ರೀಕೃತ ಬೃಹತ್ ಕೃಷಿ ಕ್ಷೇತ್ರಗಳ ಸ್ಥಾಪನೆಗೆ ಬೆಂಬಲವಿತ್ತಿದೆ. ಇದು ಲಾಭದಾಯಕವೆಂದೂ ಸಮಿತಿ ಅಭಿಪ್ರಾಯಪಟ್ಟಿದೆ.

ಕಾಂಗೋಗೆ  ಭಾರತದ ಯುದ್ಧ ಪಡೆ
ನವದೆಹಲಿ, ಮಾ. 10 -
ವಿಶ್ವರಾಷ್ಟ್ರಸಂಸ್ಥೆ ಕಾರ್ಯಾಚರಣೆಗೆ ಬೆಂಬಲ ನೀಡಲು ಕಾಂಗೋಗೆ ಕಳುಹಿಸಲಾಗಿರುವ ಭಾರತದ ಮಿಲಿಟರಿ ತಂಡದಲ್ಲಿ 2886 ಯುದ್ಧ ಸೈನಿಕರೂ ಸೇರಿ ಒಟ್ಟು ಸುಮಾರು ಐದು ಸಾವಿರ ಸೈನಿಕರಿರುತ್ತಾರೆಂದು ರಕ್ಷಣಾ ಸಚಿವ ಶ್ರೀ ವಿ. ಕೆ. ಕೃಷ್ಣಮೆನನ್ ಇಂದು ಇಲ್ಲಿ ಪ್ರಕಟಿಸಿದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.