ADVERTISEMENT

ಶುಕ್ರವಾರ, 19-4-1963

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2013, 19:59 IST
Last Updated 18 ಏಪ್ರಿಲ್ 2013, 19:59 IST

ಬಲವಂತವಾಗಿ ಹಿಂದಿ ಹೊರಿಸುವ ಇಚ್ಛೆಯಿಲ್ಲ: ಎಲ್. ಬಿ. ಶಾಸ್ತ್ರಿ ಭರವಸೆ
ನವದೆಹಲಿ, ಏ. 18 - ಈಗ ಪಾರ್ಲಿಮೆಂಟಿನ ಮುಂದಿರುವ ಭಾಷಾ ಮಸೂದೆಯಲ್ಲಿ ಯಾರ ಮೇಲೂ ಹಿಂದಿಯನ್ನು ಬಲವಂತವಾಗಿ ಹೊರಿಸುವ ಉದ್ದೇಶವಿಲ್ಲವೆಂದು ಕೇಂದ್ರ ಗೃಹಸಚಿವ ಶ್ರೀ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಹಿಂದ ಅಲ್ಲದ ಇತರ ಭಾಷಾ ಪ್ರದೇಶಗಳ ಹಿರಿಯ ಕಾಂಗ್ರೆಸ್ ಸದಸ್ಯರಿಗೆ ಇಂದು ಭರವಸೆಯಿತ್ತರೆಂದು ತಿಳಿದು ಬಂದಿದೆ.

ರಷ್ಯದ ಪ್ರಧಾನಿ ಪದವಿ ಬಿಡಲು ಖ್ರುಶ್ಚೋವ್ ಮೇಲೆ ಒತ್ತಾಯ
ರೋಂ, ಏ. 18 - ರಷ್ಯದ ಪ್ರಧಾನಿ ಖ್ರುಶ್ಚೋವ್‌ರ ಮೇಲೆ ಕಡೆಯ ಪಕ್ಷ ಪ್ರಧಾನಿ ಪದವಿಯನ್ನಾದರೂ ಬಿಡುವಂತೆ ಒತ್ತಾಯ ತರಲಾಗಿದೆಯೆಂದು ಇಟಲಿಯ ಕ್ರಿಸ್ಚಿಯನ್ ಡೆಮೊಕ್ರಾಟ್ ಪಕ್ಷದ ಅಂಗವಾದ `ಪೊಪೊಲೊ' ಪತ್ರಿಕೆಯ ಲಂಡನ್ ವರದಿಕಾರ ಇಂದು ವರದಿ ಮಾಡಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.